ನಾಯಕನಹಟ್ಟಿ : ಪಟ್ಟಣದ ಹೊರಮಠದ ದ್ವಾರ ಬಾಗಿಲು ಹತ್ತಿರದ ರಸ್ತೆ ಗುಂಡಿ ಬಿದ್ದು ನೀರು ಶೇಖರಣೆಗೊಂಡು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೊಳಚೆ ನೀರನಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಬೋಸೆದೇವರಹಟ್ಟಿ ಮಹಾಂತೇಶ್ ಮಾತನಾಡಿ ಪ್ರತಿದಿನ ಭಕ್ತರು ದೇವಸ್ಥಾನಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕು. ಮಳೆ ಬಂದರೆ ಸಾಕು ಈ ಜಾಗದಲ್ಲಿ ಹೊಂಡವಾಗಿ ನಿರ್ಮಾಣವಾಗುತ್ತದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ಪಟ್ಟಣ ಪಂಚಾಯತಿಗೆ ವ್ಯಾಪ್ತಿಗೆ ಬರುವುದರಿಂದ ಅಧಿಕಾರಿಗಳು ಇದ್ದ ಕಡೆ ಗಮನಹರಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
ಪ್ರತಿ ಸೋಮವಾರದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪಲ್ಲಕ್ಕಿ ಉತ್ಸವ ಒಳ ಮಠದಿಂದ ಇದೇ ರಸ್ತೆಯಲ್ಲಿ ಹೊರಮಠಕ್ಕೆ ಬಂದು ಹೋಗುತ್ತದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹಲವು ಬಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರೂ, ಇತ್ತ ಕಡೆ ತಿರುಗಿ ಸಹ ನೋಡುತ್ತಿಲ್ಲವೆಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಟೈಯರ್ ಗಾಡಿ ಪಾಪಣ್ಣ ಮಾತನಾಡಿ ಹೊಸ ವಾಹನ ಖರೀದಿಸಿದ ಮಾಲೀಕರು ದೇವಸ್ಥಾನಕ್ಕೆ ಪೂಜೆಗೆ ಎಂದು ವಾಹನವನ್ನು ಕೊಚ್ಚ ನೀರಿನಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಜಾಗನೂರಹಟ್ಟಿ ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಮಾದೇನಹಟ್ಟಿ ಬಸಯ್ಯ, ಮಲ್ಲೂರಹಳ್ಳಿ ಪರ್ವತಯ್ಯ ಇನ್ನು ಮುಂತಾದವರು ಹಾಜರಿದ್ದರು.