ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಸುಮಾ ಸುಭಾಷ್ ಚಂದ್ರ ಬೋಸ್ ಅವಿರೋಧ ಆಯ್ಕೆ
ನಾಯಕನಹಟ್ಟಿ : ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆಯಾಗಿ ಸುಮಾ ಸುಭಾಷ್ ಚಂದ್ರ ಬೋಸ್ ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಚುನಾವಣಾಧಿಕಾರಿ
ಕೆ.ಎಸ್.ಸುರೇಶ್ ಘೋಷಣೆ ಮಾಡಿದರು.
ಗುರುವಾರ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ದಿನಾಂಕ : 30-09-2024ರಂದು ಉಪಾಧ್ಯಕ್ಷರ ಚುನಾವಣೆ ಸಂಬಂಧ ಗ್ರಾಮ ಪಂಚಾಯತಿ ಸದಸ್ಯರ ಸಭೆ ಕರೆಯಲಾಗಿತ್ತು. ಕೋರಂ ಕೊರತೆ ಕಾರಣದಿಂದಾಗಿ ಆ ಸಭೆಯನ್ನು ಅಕ್ಟೋಬರ್ 10ಕ್ಕೆ ಮುಂದೂಡಲಾಗಿತ್ತು.
ಅಕ್ಟೋಬರ್ 10 ರಂದು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ
ಪರಿಶಿಷ್ಟ ಜಾತಿ (ಮಹಿಳೆ) ಸ್ಥಾನಕ್ಕೆ ಮೀಸಲಾಗಿದ್ದ ಒಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರಿಂದ ಅಭ್ಯರ್ಥಿಯಾಗಿದ್ದ ಸುಮಾ ಕೊಂ. ಸುಭಾಷ್ ಚಂದ್ರ ಬೋಸ್ ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸಿದ ಕಾರಣ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಸುಮಾ ಸುಭಾಷ್ ಚಂದ್ರ ಬೋಸ್ ರವರನ್ನು ಆಯ್ಕೆ ಮಾಡಲಾಯಿತು.
ಇನ್ನೂ ನೂತನ ಉಪಾಧ್ಯಕ್ಷೆ ಸುಮಾ ಸುಭಾಷ್ ಚಂದ್ರ ಬೋಸ್ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಸಹಕಾರದೊಂದಿಗೆ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಆರ್.ಸರಿತಾ ರಾಜನಾಯ್ಕ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ರತ್ನಮ್ಮ ರಾಜಣ್ಣ,ಸದಸ್ಯರಾದ ಆರ್. ಬಸವರಾಜ್, ಎಸ್. ಸಿದ್ದಪ್ಪ, ಟಿ. ಕಾಟಯ್ಯ ವರವು, ಡಾ.ಪಿ.ಕಾಟಂಲಿಂಗಯ್ಯ, ರತ್ನಮ್ಮ ರಾಜಣ್ಣ, ರಾಯಮ್ಮ ಬೈಯಣ್ಣ, ಎನ್ ಕೃಷ್ಣವೇಣಿ ರಾಜು, ಗುರುಮೂರ್ತಿ, ಡಿ.ಪಿ. ಸೂರಮ್ಮ ಶಂಕರ್ ಮೂರ್ತಿ ವರವು, ಅಕ್ಕಮ್ಮ ರಾಜಣ್ಣ, ಶಿವರುದ್ರಮ್ಮ ರಾಮಣ್ಣ, ರಾಜಣ್ಣ ಬೋರಯ್ಯ, ಊರಿನ ಮುಖಂಡ ಎಚ್. ನಾಗರಾಜ್ ,ಕಲ್ಯಾಣಕುಮಾರ್, ,ಪಿಡಿಒ ಕೆ.ಓ.ಶಶಿಕಲಾ, ಕಾರ್ಯದರ್ಶಿ ಎಸ್. ಆರ್. ಚಿಂದನಂದ್,
ಗ್ರೇಡ್-2 ಎಂ.ವಿಶ್ವನಾಥ್, ಬಿಲ್ ಕಲೆಕ್ಟರ್ ಎಂ.ಬಿ.ರಘು, ಕಂಪ್ಯೂಟರ್ ಅಪರೇಟರ್ ಪಿ. ಕಮಲಮ್ಮ ಮತ್ತಿತರರು
ಇದ್ದರು.