ಡಾl ಬಿ ಆರ್ ಅಂಬೇಡ್ಕರ್ ಅವರ ದೀಕ್ಷ ತೆಗೆದುಕೊಂಡ ನಾಗಪುರ ಕ್ಷೇತ್ರಕ್ಕೆಹೋಗುವ ವಾಹನಕ್ಕೆ :ತಹಶೀಲ್ದಾರ್ ರೆಹನ್ ಪಾಷಾ ಚಾಲನೆ ,
ಚಳ್ಳಕೆರೆ
ಪ್ರತಿ ವರ್ಷವಂತೆ ಈ ವರ್ಷವೂ ಕೂಡ ಸಮಾಜ ಕಲ್ಯಾಣ ಇಲಾಖೆಯಿಂದ ಕರ್ನಾಟಕ ದಲಿತ ಸಂಘವು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ದೀಕ್ಷೆ ತೆಗೆದುಕೊಂಡಿರುವ ಮಹಾರಾಷ್ಟ್ರದ ನಾಗಪುರಕ್ಕೆ ಭೂಮಿ ಪೂಜೆಗೆ ಹೋಗದಿದ್ದಲ್ಲಿದ್ದಾರೆ ಎಂದು ತಾಲೂಕ್ ದಂಡಾಧಿಕಾರಿ ರೆಹಾನ್ ಪಾಷಾ ತಿಳಿಸಿದರು,
ಇವರು ನಗರದ ಡಾ. ಬಿಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ದಲಿತ ಸಂಘದ ವತಿಯಿಂದ ಆಯೋಜಿಸಿರುವ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಇವ್ರು ,
ಡಾ/ ಬಿ ಆರ್ ಅಂಬೇಡ್ಕರ್ ಅವರು ದೇಶ ಕಂಡ ಅಪ್ರತಿಮ ನಾಯಕರು ಸಮಾಜದ ಸಮಾನತೆಗೋಸ್ಕರ ಹಗಲೆರಳು ಶ್ರಮಿಸಿ ಪ್ರತಿಯೊಂದು ಸಮಾಜಕ್ಕೂ ನ್ಯಾಯಯುತವಾಗಿ ಸಂವಿಧಾನ ರಚಿಸಿ ಏಕತೆಗೆ ಮೈಲುಗಲ್ಲು ಇಟ್ಟ ಬಿಆರ್ ಅಂಬೇಡ್ಕರ್ ಅವರ ದೀಕ್ಷೆ ತೆಗೆದುಕೊಂಡಿರುವ ಜಾಗವಾದ ಮಹಾರಾಷ್ಟ್ರದ ನಾಗಪುರಕ್ಕೆ ಕರ್ನಾಟಕ ದಲಿತ ಸಂಘದ ವತಿಯಿಂದ ಎಲ್ಲ ಯುವಕರು ಒಮ್ಮತದಿಂದ ಹೊರಟಿದ್ದಾರೆ ಈ ಕಾರಣದಿಂದಾಗಿ ಅವರೆಲ್ಲರಿಗೂ ಬಿ ಆರ್ ಅಂಬೇಡ್ಕರ್ ಅವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು ,
ಇನ್ನು ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದೇವಲ ನಾಯಕ್ ಬೋರಯ್ಯ ಅಭಿಷೇಕ್ ವಾರ್ಡನ್ ಅಲಿಖಾನ್ ಸೇರಿದಂತೆ ಅನೇಕರು ಇದ್ದರು ,