ಚಳ್ಳಕೆರೆ :
ಮಧ್ಯ‌ಕರ್ನಾಟಕ ಭಾಗದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ
ಶರಣ ಸಂಸ್ಕೃತಿ ಉತ್ಸವ ಅದ್ದೂರಿಯಾಗಿ ಜರುಗಿತು.

ಕಲ್ಲಿನ ಕೋಟೆ ಚಿತ್ರದುರ್ಗ
ಮುರುಘಾ ಮಠದಲ್ಲಿ ನಡೆದ ಕೃಷಿ ಮೇಳ ಜಾನುವಾರುಗಳ ಪ್ರದರ್ಶನದಲ್ಲಿ ಚಳ್ಳಕೆರೆ ತಾಲೂಕಿನ
ಪ್ರಗತಿಪರ ರೈತ ಡಾ. ಆರ್.ಎ. ದಯಾನಂದ್ ಮೂರ್ತಿ , ಕೃಷಿ ಮೇಳದಲ್ಲಿ ಭಾಗವಹಿಸಿ, ಬಸವಶ್ರೀ ಶರಣರಿಂದ ಪ್ರಮಾಣ ಪತ್ರ ಹಾಗೂ ಅಭಿನಂದನೆ ಸ್ವೀಕರಿಸಿದರು.

ತಮ್ಮ
ತೋಟದಲ್ಲಿ ಸಾಕಿದ ಎಮ್ಮೆಗಳ ಜೊತೆಗೆ ಶರಣರ ಉತ್ಸವಕ್ಕೆ ಭಾಗಿಯಾಗಿ ಪ್ರದರ್ಶನಕ್ಕೆ ತರಲಾಗಿತ್ತು.

ಉತ್ಸವದಲ್ಲಿ ರಾಜಸ್ಥಾನದಿಂದ ಜಾಪರ್ ತಳಿಯ ಎಮ್ಮೆಗಳು, ಹಲವಾರು ಮುರ್ರಾ ತಳಿಯ ಎಮ್ಮೆಗಳು, ನಾಟಿ ತಳಿಯ ಎಮ್ಮೆಗಳು ಬಂದಿದ್ದವು. ಹಳ್ಳಿಕಾರ್ ತಳಿಯ ಹೋರಿಗಳು, ಗೀರ್ ತಳಿಯ ಹಸುಗಳು, ಕುರಿ, ಟಗರು ಸಾವಿರಾರು ಸಂಖ್ಯೆಯಲ್ಲಿ ರೈತರು ಸಾರ್ವಜನಿಕರು ಭಕ್ತಾದಿಗಳು ಹಲವಾರು ಮಠದ ಸ್ವಾಮೀಜಿಗಳು ಶಾಲಾ ಕಾಲೇಜಿನ ಮಕ್ಕಳು ರಾಜಕಾರಣಿಗಳು ಬಂದು ಜಾನುವಾರಗಳ ಪ್ರದರ್ಶನವನ್ನು ಕಣ್ತುಂಬಿಸಿಕೊಂಡರು ಎಂದು ಪ್ರಗತಿಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡರು.

ಇನ್ನೂ ಭಾಗವಹಿಸಿದ ಎಲ್ಲಾ ರೈತರಿಗೆ
ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಮತ್ತು ಶ್ರೀ ಬಸವ ಪ್ರಭು ಸ್ವಾಮೀಜಿಗಳು ಪ್ರಶಸ್ತಿ ಮತ್ತು ಗೋಲ್ಡ್ ಮೆಡಲ್ ಹಾಗೂ ಚೆಕ್ಕನ್ನು ನೀಡಿ ಅಭಿನಂದನೆ ‌ಸಲ್ಲಿಸಿದರು.

About The Author

Namma Challakere Local News
error: Content is protected !!