ಚಳ್ಳಕೆರೆ :
ಭಾರತ ಕಂಡ ಅತ್ಯಂತ ಶ್ರೇಷ್ಠ ಉದ್ಯಮಿ ಸೇವಕ ಹಾಗೂ ಜನಾನುರಾಗಿ ಬಡವರ ಬಂಧು ರತನ್ ಟಾಟಾ ರವರ ನಿಧನ ನಮ್ಮೆಲ್ಲರಿಗೂ ನೋವು ತಂದಿದೆ ಎಂದು ನಗರಸಭೆ ನಾಮ ನಿರ್ದೇಶನ ಸದಸ್ಯ, ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನಕುಮಾರ್ ಹೇಳಿದರು.
ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ರತನ್ ಟಾಟಾ ನಿಧನಕ್ಕೆ ಶ್ರಂಧಾಂಜಲಿ ಸಲ್ಲಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಚಳ್ಳಕೆರೆ ಅಂಬೇಡ್ಕರ್ ವೃತ್ತದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಮೌನಚರಣೆ ಮಾಡಲಾಯಿತು .
ಈ ಸಂದರ್ಭದಲ್ಲಿ
ರತನ್ ಟಾಟಾ ರವರ ದೇಶಭಕ್ತಿ ಅಪಾರ ಸೇವೆ ಮನೋಭಾವವನ್ನು ಅವರ ಸೇವೆಯನ್ನು ಗುರುತಿಸಿ ಕೆಲವರು ಮಾತನಾಡಿದರು
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಟಿ .ಆರ್. ಚಂದ್ರಶೇಖರ್, ನಿರ್ದೇಶಕರುಗಳಾದ
ಆರ್ .ಅಶೋಕ್ , ಬಾನು ಬಸವರಾಜ್ (ಬಾಬು), ದಿವಾಕರ್ .ಫ್ಲಕ್ಸ್ ನರಸಿಂಹ, ನಾಗೇಶ್, ಬೆಂಗಳೂರ್ ಮಂಜ, ಸಾಯಿ ಮಂಜು, ನಾಗೇಶ್ ಎಲ್.ಇ.ಡಿ ಅಭಿ, ಚೇತನ್ ಗಾಯಕ್ವಾಡ್,
ಹಿರಿಯ ಛಾಯಾಗ್ರಹಕ ದೊಡ್ಡೇರಿ ತಿಪ್ಪೇಶ್, ಇತರರು ಪಾಲ್ಗೊಂಡಿದ್ದರು.