“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ ಅನುಸಂಧಾನ ಅಗತ್ಯ”:-ಮಾತಾಜೀ ತ್ಯಾಗಮಯೀ ಅಭಿಮತ.

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಸಂದೇಶಗಳನ್ನು ನಿತ್ಯ ಅಧ್ಯಯನ ಮಾಡುವುದರಿಂದ ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡು ಶಾಶ್ವತ ಆನಂದವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ನಾವು ಕ್ಷಣಿಕ ಸುಖಕ್ಕಾಗಿ ಆಸೆ ಪಡೆದೆ ಶಾಶ್ವತವಾದ ಸುಖಕ್ಕಾಗಿ ಹಾತೊರೆದು ಶಾರದಾದೇವಿ ಅವರ ಜೀವನ ಘಟನೆಗಳ ಅನುಸಂಧಾನದಿಂದ ಶಾಂತಿಯನ್ನು ಪಡೆಯಲು ಸಾಧ್ಯ ಎಂದು ಶ್ರೀಮಾತೆ ಶಾರದಾದೇವಿ ಅವರ ವೈಶಿಷ್ಟ್ಯತೆಗಳ ಬಗ್ಗೆ ವಿವರಿಸಿದರು.

ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರು ವಿಶೇಷ ದೇವೀ ಭಜನೆಗಳನ್ನು ನಡೆಸಿಕೊಟ್ಟರು.ಈ ಭಜನಾ ಕಾರ್ಯಕ್ರಮದಲ್ಲಿ ನಾಗಶಯನ ಗೌತಮ್,ಮಾಣಿಕ್ಯ ಸತ್ಯನಾರಾಯಣ, ಸತ್ಯಪ್ರಿಯ, ಸುಬ್ರಹ್ಮಣ್ಯಶಾಸ್ತ್ರಿ, ಯತೀಶ್ ಎಂ ಸಿದ್ದಾಪುರ,ಸುಮನ, ಸಂತೋಷ್, ಗೀತಾ ನಾಗರಾಜ್, ಡಾ. ಭೂಮಿಕ, ಮೀನಾಕ್ಷಿ, ಕೆ.ಎಸ್.ವೀಣಾ, ಚೆನ್ನಕೇಶವ,ಅಂಬುಜ,ಕವಿತಮ್ಮ, ಯಶೋಧಾ, ತಿಪ್ಪಮ್ಮ, ಕೃಷ್ಣಮೂರ್ತಿ, ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!