ಚಳ್ಳಕೆರೆ :
ರೈತರು ವಿವಿಧ ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬೇಸಾಯದ ಖರ್ಚು ತಗ್ಗಿಸಿ ಲಾಭ ಮಾಡಿಕೊಳ್ಳುವಂತೆ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಡಾ.ಶರಣಬಸವ ಭೋಗಿ
ರೈತರಿಗೆ ಕರೆ ನೀಡಿದರು.

ಅವರು ತಾಲೂಕಿನ ತಳಕು ಹೋಬಳಿಯ ಬೇಡರೆಡ್ಡಿಹಳ್ಳಿ ಗ್ರಾಮದ ರೈತ ನಾಗೇಶ್ ರೆಡ್ಡಿ ತೋಟದಲ್ಲಿ ಆಯೋಜಿಸಿದ್ದ ರೈತರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆಧುನಿಕ ತಾಂತ್ರಿಕತೆ ಅಳವಡಿಸಿ ಬೇಸಾಯದ ವೆಚ್ಚ ಕಡಿಮೆ ಮಾಡಿ ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಡಾ. ಓಂಕಾರಪ್ಪ ಮಾತನಾಡಿ,
ಸಾವಯವ ಗೊಬ್ಬರ ಜೈವಿಕ ಗೊಬ್ಬರಗಳ ಬಳಕೆ ಹಾಗೂ ಟೊಮೆಟೊ ಬೆಳೆಯ ರೋಗಭಾದೆ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಕೃಷಿ ತಜ್ಞರ ಸಂಸ್ಥೆವತಿಯಿಂದ
ವೀರಭದ್ರ ರೆಡ್ಡಿ ಮಾತನಾಡಿ, ಬಯಲು ಸೀಮೆಯ ಒಣಭೂಮಿಯಲ್ಲಿ ತರಕಾರಿ ಬೇಸಾಯದ ತಾಂತ್ರಿಕತೆ ಕುರಿತು
ರೈತರೊಂದಿಗೆ ಸಂವಾದ ನಡೆಸಿದರು.

ಇನ್ನೂ ಸಹಾಯಕ ತೋಟಗಾರಿಕೆ ನಿರ್ದೇಶಕ ಆರ್.ವಿರೂಪಾಕ್ಷಪ್ಪ ಮಾತನಾಡಿ, ರೈತರು ಅತೀ ಕಡಿಮೆ ಬಂಡವಾಳ ತೊಡಗಿಸಿ ಹೆಚ್ಚಿನ ಲಾಭ ಪಡೆಯುವ ಆಧುನಿಕತೆಯ ರೈತ ಪದ್ದತಿ ಅನುಸರಿಸಬೇಕು, ಸರಕಾರದ ದಿಂದ ರೈತರಿಗೆ ಕೆಲವು ಯೋಜನೆಗಳನ್ನು ನೀಡಿದ್ದಾರೆ, ಅವುಗಳನ್ನು ಉಪಯೋಗಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದರು.

ಇದೇ ಸಂದರ್ಭದಲ್ಲಿ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ,, ನಾಗೇಶ್ ರೆಡ್ಡಿ , ವಿಶ್ವನಾಥ ರೆಡ್ಡಿ , ಅರುಣ್ ಕುಮಾರ್, ಕಿರೀಟಪ್ಪ , ಸಹಾಯಕ ಅಧಿಕಾರಿ ಪ್ರವೀಣ್ ಕುಮಾರ್, ಇತರ ರೈತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!