ಚಳ್ಳಕೆರೆ :
ಬ್ಯಾಂಕ್ ಗಳಿಂದ ರೈತರ ಸುಲಿಗೆ ನಿಲ್ಲಬೇಕು
ಬ್ಯಾಂಕ್ ಗಳಲ್ಲಿ ರೈತರು ಸಾಲ ಕೇಳಲು ಹೋದಾಗ
ಅಲ್ಲಿನೋ ಡ್ಯೂ ಸರ್ಟಿಫಿಕೇಡ್ ತರಲು ಹೇಳುತ್ತಾರೆ.
ಇದನ್ನು
ಕೊಡಲು ಪ್ರತೀ ಬ್ಯಾಂಕ್ ಗಳು ರೈತರಿಗೆ 150 ರೂ ವಸೂಲಿ
ಮಾಡುತ್ತಿವೆ ಎಂದು ಹೊಳಲ್ಕೆರೆ ರೈತ ಮುಖಂಡ ಈಚಘಟ್ಟದ
ಸಿದ್ದವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಅವರು ರೈತರ
ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಇಂದು ಹೊಳಲ್ಕೆರೆಯಲ್ಲಿ ನಡೆಸಿದ
ಪ್ರತಿಭಟನೆಯಲ್ಲಿ ಮಾತಾಡಿ, ಬ್ಯಾಂಕ್ ಗಳು ಕಾನೂನು
ಬಾಹಿರವಾಗಿ ಕೆಲಸ ಮಾಡುತ್ತಿವೆ. ಇದನ್ನು ಸಂಬಂಧಪಟ್ಟವರು
ತಪ್ಪಿಸಬೇಕೆಂದು ಆಗ್ರಹಿಸಿದರು.