ಚಳ್ಳಕೆರೆ : ಪ್ರತಿಯೊಬ್ಬರೂ
ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಜಾಗೃತರಾಗಬೇಕು ಎಂದು ಗ್ರಾಪಂ ಅಧ್ಯಕ್ಷ
ಬಿ.ಆನಂದಕುಮಾರ್ ಹೇಳಿದರು.

ಅವರು
ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ
ಸ್ಥಳೀಯ ಗ್ರಾಪಂ, ಎಸ್ಎಸ್‌ ನಾರಾಯಣ ಆಸ್ಪತ್ರೆ,
ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮತ್ತು ಹೃದಯ
ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಣ್ಣ ಆರೋಗ್ಯ ಸಮಸ್ಯೆಗೂ ದೊಡ್ಡ ಪ್ರಮಾಣದಲ್ಲಿ
ಹಣ ವ್ಯಯಿಸಬೇಕಿದೆ. ಇಂದಿನ ವ್ಯತಿರಿಕ್ತ ವಾತಾವರಣ
ಮತ್ತು ಬದಲಾದ ಆಹಾರ ಬಳಕೆಯಲ್ಲಿ ಆರೋಗ್ಯ
ಸಮಸ್ಯೆಯನ್ನು ಕಾಣುತ್ತಿದ್ದೇವೆ. ಬಳಸುವ ಊಟ,
ನೀರು ಮತ್ತು ಮನೆಯ ಸ್ವಚ್ಛತೆಯಲ್ಲಿ ಸ್ವಯಂ ಜಾಗೃತಿ
ಇರಬೇಕು ಎಂದು ಕಿವಿಮಾತು ಹೇಳಿದರು.

ನಾರಾಯಣ ಆಸ್ಪತ್ರೆ ಡಾ.ಗುಡ್ಡಪ್ಪ ಮಾತನಾಡಿ, ಇಂದಿನ ಮನುಷ್ಯ
ಹೃದಯ ಸಂಬಂಧಿ ಸಣ್ಣ
ಸಮಸ್ಯೆಯನ್ನೂ ನಿರ್ಲಕ್ಷಿಸಬಾರದು.
ಇತ್ತೀಚಿನ ದಿನಗಳಲ್ಲಿ ಸಣ್ಣ
ವಯಸ್ಸಿನಲ್ಲೂ
ಹೃದಯ
ಸಂಬಂಧಿ ಕಾಯಿಲೆ ಬರುತ್ತಿವೆ. ಹೀಗಾಗಿ ಆರೋಗ್ಯ
ಕಾಪಾಡಿಕೊಳ್ಳುವಲ್ಲಿ ಎಚ್ಚರ ವಹಿಸಬೇಕು. ಉಚಿತ
ಶಿಬಿರಗಳ ಸದುಪಯೋಗ ಪಡೆದು ಸಣ್ಣ ಸಮಸ್ಯೆ
ಇದ್ದಾಗಲೇ ಸರಿಪಡಿಸಿಕೊಳ್ಳುವ ಜಾಣ್ಮೆ ಇರಬೇಕು
ಎಂದು ತಿಳಿಸಿದರು.

ಶಿಬಿರದಲ್ಲಿ ಭಾಗವಹಿಸಿದ್ದ ರೋಗಿಗಳಲ್ಲಿ 60
ಜನರನ್ನು ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಲಹೆ
ನೀಡಲಾಯಿತು.

ಎಸ್‌ಆರ್‌ಎಸ್‌ ವಿದ್ಯಾಸಂಸ್ಥೆ ಅಧ್ಯಕ್ಷ
ಲಿಂಗಾರೆಡ್ಡಿ,ಪಿಎಸ್ಐ ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ, ಪಿಡಿಒ ಕೊರಯ್ಯ,
ವೀರಭದ್ರನಾಯಕ, ದಳಪತಿ ಭೀಮಣ್ಣ, ಶಿವಣ್ಣ, ಗ್ರಾಪಂ
ಮಾಜಿ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ, ಡಾ.ರಘುನಂದನ್‌,
ಡಾ.ಮಂಜುನಾಥ್‌, ಲೋಕನಾಥ್, ಕೆ.ಸಿ. ಮಹೇಶ್‌,
ಕರಿಯಣ್ಣ, ಅನಿತಾ ಮಂಜು ಇತರರು ಇದ್ದರು.

Namma Challakere Local News

You missed

error: Content is protected !!