ಚಳ್ಳಕೆರೆ:

ಚಳ್ಳಕೆರೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗದಿಂದ ತಾಲೂಕು ಘಟಕದ ಗೌರವಾಧ್ಯಕ್ಷ ಭೋಜರಾಜ್ ಮತ್ತು ತಾಲೂಕ ಅಧ್ಯಕ್ಷರ ಪಿ.ಮಂಜುನಾಥ್ ನೇತೃತ್ವದಲ್ಲಿ ಇಂದು ಬೆಳೆ ಪರಿಹಾರವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ತರಿಸಿಕೊಟ್ಟ ಕಿರ್ತೀ ಹಾಗೂ ಈ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜನರಾದ ತಹಶಿಲ್ದಾರ್ ರೇಹಾನ್ ಪಾಷಗೆ ಸನ್ಮಾನಿಸಿ ಗೌರವಿಸಿದರು.

ನಗರದ ತಾಲೂಕು ಕಛೇರಿಯಲ್ಲಿ
ತಾಲೂಕು ಪ್ರಧಾನ ಕಾರ್ಯದರ್ಶಿ ದೇವರ ಮರಿಕುಂಟೆ ಚಂದ್ರಣ್ಣನವರು ಹಾಗೂ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರ ಸುರೇಶ್, ಹಾಗೂ ಎಲ್ಲಾ ಪದಾಧಿಕಾರಿಗಳ ವತಿಯಿಂದ ಚಳ್ಳಕೆರೆ ತಾಲ್ಲೂಕು ತಹಸಿಲ್ದಾರ್ ರೆಹಮಾನ್ ಪಾಷರ್ ಅವರ ಉತ್ತಮವಾದ ಸಮಾಜಸೇವೆ ಹಾಗೂ ಸರ್ಕಾರದಿಂದ ಬರಬೇಕಾದ ಬರ ಪರಿಹಾರ ರೈತರಿಗೆ ತಲುಪಿಸುವಲ್ಲಿ ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ ಸನ್ಮಾನಿಸಿ ಶುಭಾಷಯ ಕೋರಿದರು.

About The Author

Namma Challakere Local News
error: Content is protected !!