ಚಳ್ಳಕೆರೆ :
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಮಾದೀಗ ದಂಡೋರ
ಮುಖಂಡ ಶ್ರೀರಾಮ್
ಒಳ ಮೀಸಲಾತಿ ಜಾರಿಗೆ ಹತ್ತಾರು ಜನ ಪ್ರಾಣ ಕಳೆದುಕೊಂಡಿದ್ದಾರೆ,
ಹೀಗಿದ್ದರೂ ಸರ್ಕಾರ ಜಾಣ ಮೌನ ವಹಿಸಿರುವುದು ಸರಿಯಲ್ಲ
ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀ ರಾಮ್
ಹೇಳಿದರು. ಹಿರಿಯೂರಿನ ಪಟ್ರೆ ಹಳ್ಳಿಯಿಂದ ಡಿಸಿ ಕಚೇರಿಗೆ 2
ದಿನಗಳ ಪಾದಯಾತ್ರೆಯಲ್ಲಿ ಮಾತನಾಡಿ, ಒಳಮೀಸಲಾತಿ ಜಾರಿಗೆ
ರಾಜ್ಯಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲದೆ ಹೋದರೆ ಮುಂದಿನ
ದಿನಗಳಲ್ಲಿ ಮಠಾಧೀಶರ ಮಾರ್ಗದರ್ಶನದಲ್ಲಿ ಬೃಹತ್ ಹೋರಾಟ
ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.