ಚಳ್ಳಕೆರೆ:ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ
ಜಯಂತಿಯನ್ನು ಅ.17ರಂದು ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಟಿ
ರಘುಮೂರ್ತಿ ಅಧ್ಯಕ್ಷ ತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ
ತೀರ್ಮಾನಿಸಲಾಯಿತು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ
ಜಯಂತಿ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ
ಕೈಗೊಳ್ಳಲಾಯಿತು.

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ
ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಸಮಾಜದ ಬಾಂಧವರು ಸೇರಿದಂತೆ
ಇತರರು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು. ಕಲೆ, ಜಾನಪದ
ಸಂಸ್ಕೃತಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ತಾಲೂಕಿನ ನಾನಾ ಸಂಘ ಸಂಸ್ಥೆಗಳು,
ಸಮುದಾಯದ ಮುಖಂಡರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ
ಶ್ರಮಿಸುವಂತೆ ಶಾಸಕರು ಮನವಿ ಮಾಡಿದರು.

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ
ಆಚರಿಸಲು ಸಭೆಯು ನಿರ್ಣಯ ಕೈಗೊಂಡಿತು.

ಅ.17ರ ಬೆಳಗ್ಗೆ ಒಂಬತ್ತು ಗಂಟೆಗೆ ವಾಲ್ಮೀಕಿ ವೃತ್ತದಿಂದ ಮೆರವಣಿಗೆಗೆ ಚಾಲನೆ
ದೊರೆಯಲಿದ್ದು ವೇದಿಕೆ ಕಾರ್ಯಕ್ರಮವನ್ನು ಮಧ್ಯಾಹ್ನ 2 ಗಂಟೆಗೆ
ನಿಗದಿಗೊಳಿಸಲಾಯಿತು.

ಜಿಲ್ಲೆಯ ಜಾನಪದ ಕಲಾತಂಡಗಳನ್ನು ಆಹ್ವಾನಿಸುವುದು, ಎಸ್ ಎಸ್ ಎಲ್ ಸಿ
ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದವರಿಗೆ ಪ್ರೋತ್ಸಾಹ ಧನ, ವಾಲ್ಮೀಕಿ
ಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವುದು ಹಾಗೆಯೇ
ವಾಲ್ಮೀಕಿ ಜಯಂತಿಯಂದು ಭಾಷಣ ಮಾಡಲು ವಿಶೇಷ ಆಹ್ವಾನಿತರನ್ನು
ಆಹ್ವಾನಿಸಲು ತೀರ್ಮಾನಿಸಲಾಯಿತು.

ವಾಲ್ಮೀಕಿ ಜಯಂತಿ ದಿನದ ಮೆರವಣಿಗೆ ಭಾವಚಿತ್ರವನ್ನು ಕಳೆದ 42
ವರ್ಷಗಳಿಂದ ಕೊಡುಗೆ ನೀಡುತ್ತಾ ಬಂದಿರುವ ಡಾ. ನಾಗೇಂದ್ರ ನಾಯಕ
ರವರು ಈ ವರ್ಷವೂ ಮುಂದುವರೆಸುವುದಾಗಿ ಭರವಸೆ ನೀಡಿದರು.

ವಾಲ್ಮೀಕಿ
ಸಮುದಾಯದ ಮುಖಂಡರು 16ರಂದು ಬೈಕ್ ರ್ಯಾಲಿ ಹಾಗೂ 17ರಂದು
ಮೂರು ಡಿಜೆ ಸದ್ದಿನ ಮೆರವಣಿಗೆಗೆ ಬೇಡಿಕೆ ಸಲ್ಲಿಸಿದರು ಇದಕ್ಕೆ ಶಾಸಕ ಟಿ
ರಘುಮೂರ್ತಿ ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಂಡು ಸೂಕ್ತ ಬಂದೋಬಸ್ತ್
ವ್ಯವಸ್ಥೆಯಲ್ಲಿ ಅನುಮತಿ ನೀಡಲು ಡಿವೈಎಸ್ಪಿ ಟಿಬಿ ರಾಜಣ್ಣರವರಿಗೆ ತಿಳಿಸಿದರು.

ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಗರದ ಸ್ವಚ್ಛತೆ ಹಾಗೂ
ನಗರದಲ್ಲಿನ ಮಹನೀಯರ ಪುತ್ತಳಿಗಳ ಸ್ವಚ್ಛತೆಯ ಬಗ್ಗೆ ಗಮನಹರಿಸುವಂತೆ
ನಗರಸಭೆ ಪೌರಾಯುಕ್ತ ಜಗ್ಗಾರೆಡ್ಡಿ ಅವರಿಗೆ ಸೂಚಿಸಿದರು.

ಸಭಾ
ಕಾರ್ಯಕ್ರಮದ ವೇಳೆ ಮಹರ್ಷಿ ವಾಲ್ಮೀಕಿ ಬರೆದ ಶ್ರೀ ರಾಮಾಯಣ ಮಹಾ
ಕಾವ್ಯದ ಪುಸ್ತಕಕ್ಕೆ ಪೂಜೆ ಸಲ್ಲಿಸಲು ಹಾಗೂ ಸಾಧಕರಿಗೆ ಕುವೆಂಪು ರಚಿತ
ವಾಲ್ಮೀಕಿ ರಾಮಾಯಣ ಪುಸ್ತಕಗಳನ್ನು ನೀಡಲು ಮನವಿ ಮಾಡಲಾಯಿತು
ಸಭೆಯು ಅನುಮೋದನೆ ನೀಡಿತು ಕಾರ್ಯಕ್ರಮದ ಅಚ್ಚುಕಟ್ಟು ವ್ಯವಸ್ಥೆಗೆ
ಹಲವರು ಸಲಹೆ, ಮಾರ್ಗದರ್ಶನ ನೀಡಿದರಲ್ಲದೆ ಹಲವು ಯುವಕರು ಹಾಗೂ
ಮುಖಂಡರು ವಾಲ್ಮೀಕಿ ಜಯಂತಿಯಂದು ಡಿಜೆ ಸಂಗೀತ, ಮಜ್ಜಿಗೆ ನೀರು
ವಿತರಣೆ ಹೂವಿನ ಅಲಂಕಾರ ವಿಡಿಯೋ ಮತ್ತು ಫೋಟೋ ನೆನಪಿನ ಕಾಣಿಕೆ
ಉಪಹಾರ ಬೈಕ್ ರಾಲಿ ಏರ್ಪಾಡು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು
ವಹಿಸಿಕೊಂಡರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಕೆ ಟಿ ಕುಮಾರಸ್ವಾಮಿ
ತಹಶೀಲ್ದಾರ್ ರೆಹಾನ್ ಪಾಷಾ ಡಿವೈಎಸ್ಪಿ ಟಿಬಿ ರಾಜಣ್ಣ, ಗದ್ದಿಗೆ ತಿಪ್ಪೇಸ್ವಾಮಿ,
ನಗರಸಭಾ ಸದಸ್ಯರಾದ ರಮೇಶ್ ಗೌಡ, ಹೊಯ್ಸಳ ಗೋವಿಂದ , ರೈತ
ಮುಖಂಡ ಕೆಪಿ ಬೂತಯ್ಯ ಸಿಟಿ ಶ್ರೀನಿವಾಸ್ ಗಾಡಿ ತಿಪ್ಪೇಸ್ವಾಮಿ ರಘುವೀರ
ನಾಯಕ ಸುರೇಶ್, ರಘು ಪಿ ತಿಪ್ಪೇಸ್ವಾಮಿ ಯಶೋದಮ್ಮ ಸೌಭಾಗ್ಯಮ್ಮ
ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Namma Challakere Local News
error: Content is protected !!