ಚಳ್ಳಕೆರೆ :
ಅ. 5ಕ್ಕೆ ಜಯದೇವ ಕ್ರೀಡಾ ಜಾತ್ರೆಗೆ ಚಾಲನೆ
ಜಯದೇವ ಜಗದ್ಗುರು ಕ್ರೀಡಾಕೂಟವು ಅ. 5ರಿಂದ 7 ರವರೆಗೆ
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ
ಎಂದು ಮುರುಘಾ ಮಠದ ಹಾಗೂ ವಿದ್ಯಾಪೀಠದ ಆಡಳಿತ
ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಜಿಲ್ಲಾ ಸರ್ಕಾರಿ
ಹಾಗೂ ಖಾಸಗಿ ಶಾಲೆಗಳ 17ವರ್ಷದೊಳಗಿನ 8, 9 ಮತ್ತು 10ನೇ
ತರಗತಿ ವಿದ್ಯಾರ್ಥಿಗಳಿಗೆ ಕಬಡ್ಡಿ, ಖೋಖೋ, ಮಹಿಳೆಯರಿಗಾಗಿ
ವಿವಿಧ ಕ್ರೀಡೆಗಳು, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಗಳು
ನಡೆಯಲಿವೆ ಎಂದರು.