ಚಳ್ಳಕೆರೆ :
ಬೇಡಿಕೆಗಳ ಈಡೇರಿಕೆಗೆ ಗ್ರಾಮಾಡಳಿತಾಧಿಕಾರಿಗಳ
ಪ್ರತಿಭಟನೆ
ಮೊಳಕಾಲ್ಕೂರು ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮ
ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು
ಪ್ರತಿಭಟನೆ ನಡೆಸಲಾಯಿತು.
ಮೊಬೈಲ್ ತಂತ್ರಾಂಶ ಮತ್ತು ವೆಬ್ ಅಪ್ಲಿಕೇಶನ್ ಗಳ ಮೂಲಕ
ಆಗುತ್ತಿರುವ ಸಮಸ್ಯೆಗಳ ಬಗೆಹರಿಸಬೇಕು. ಮೂಲಭೂತ
ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.
ರಾಜ್ಯದ ಗ್ರಾಮೀಣ
ಸಹಾಯಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು. ಈ
ಎಲ್ಲಾ ಬೇಡಿಕೆಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು
ಕಲ್ಪಿಸಿಕೊಡದೆ ಹೋದರೆ ರಾಜ್ಯ ಮಟ್ಟದವರೆಗೂ ಪ್ರತಿಭಟನೆ
ನಡೆಸುವುದಾಗಿ ಎಚ್ಚರಿಸಿದರು.