ಚಳ್ಳಕೆರೆ :

NMOPS ನ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಧಾರದಂತೆ, NPS
& UPS ಅನ್ನು ಜಾರಿಗೆ ತರಲು
ಉದ್ದೇಶಿಸಿರುವ ಕ್ರಮವನ್ನು ಹಿಂಪಡೆದು, OPS ಅನ್ನು
ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರ ಸಂಘದಿಂದ ಇಂದು ತಹಶೀಲ್ದಾರ್ ಗೆ ಅಧ್ಯಕ್ಷ ರಾಜಣ್ಣ ಮಾನವಿ ಸಲ್ಲಿಸಿದರು

ನಗರದ ತಾಲೂಕು ಕಛೇರಿಯ ಮುಂದೆ ನೂರಾರು ನೌಕರರರು ಕಪ್ಪು ಬಟ್ಟೆ ಕಟ್ಟಿಕೊಂಡು ರಾಜ್ಯ ಸರ್ಕಾರಿ NPS
ನೌಕರರ ಸಂಘವು ಕಳೆದ 10 ವರ್ಷಗಳಿಂದ ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸುವ
ವಿಷಯದಲ್ಲಿ ನಿರಂತರ ಹೋರಾಟ ನಡೆಸುತ್ತಿರುವುದು ತಮಗೆ ತಿಳಿದ ವಿಷಯವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ರಾಷ್ಟ್ರಮಟ್ಟದಲ್ಲಿ NMOPSನ
ಸಹಯೋಗವನ್ನು ಹೊಂದಿದ ಎಂದು ಅಧ್ಯಕ್ಷ ಶ್ರೀಕಾಂತ್ ಹೇಳಿದರು.

ನವದೆಹಲಿಯಲ್ಲಿ ನಡೆದ
NMOPSನ ರಾಷ್ಟ್ರೀಯ ಕಾರ್ಯಕಾರಿಣಿಯ ತೀರ್ಮಾನದಂತೆ, ರಾಜ್ಯ ಹಾಗೂ ರಾಷ್ಟ್ರ
ಮಟ್ಟದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ,
ಸಂಘಟನೆಗಳು Old Pension Scheme ಗಾಗಿ ನಡೆಸಿದ ಹೋರಾಟದ ಫಲವಾಗಿ ಕೇಂದ್ರ
ಸರ್ಕಾರವು NPS ಯೋಜನೆಯನ್ನು ಬದಲಾಯಿಸಿ, ಏಕೀಕೃತ ಪಿಂಚಣಿ
ಯೋಜನೆಯನ್ನು (UPS) ಜಾರಿಗೆ ತರಲು ತೀರ್ಮಾನಿಸಿದೆ.

ಈ ಯೋಜನೆಯು ಸಹ
ಷೇರು ಮಾರುಕಟ್ಟೆ ಆಧಾರಿತವಾಗಿದ್ದು, ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ
ಯಾವುದೇ ಭದ್ರತೆಯನ್ನು ಒದಗಿಸುವ ಅಂಶಗಳನ್ನು ಹೊಂದಿರುವುದಿಲ್ಲ. ಆದ್ದರಿಂದ ರಾಷ್ಟ್ರಾದ್ಯಂತ NMOPS ಸಂಘಟನೆಯು ತಾಲ್ಲೂಕು,
ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ “No_NPS No_UPS Only OPS” ಎಂಬ
ಶಿರ್ಷಿಕೆಯಡಿ OPSಅನ್ನು ಜಾರಿಗೊಳಿಸುವಂತೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ
ಸರ್ಕಾರವನ್ನು ಒತ್ತಾಯಿಸಿ, ಮನವಿ ಸಲ್ಲಿಸಿದ್ದೆವೆ ಎಂದರು.

ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಏಕೀಕೃತ
ಪಿಂಚಣಿ ವ್ಯವಸ್ಥೆಯನ್ನು ಹಿಂಪಡೆಯುವಂತೆ ಮತ್ತು ರಾಜ್ಯದಲ್ಲಿ NPS
ಯೋಜನೆಯನ್ನು ಪರಾಮರ್ಶಿಸಲು ರಚಿಸಿರುವ ಸಮಿತಿಯನ್ನು ಸಂಘವು ತೀವ್ರವಾಗಿ
ವಿರೋಧಿಸುತ್ತಾ, ಕಾಂಗ್ರೆಸ್‌ ಪಕ್ಷವು ಈಗಾಗಲೇ ನಮ್ಮ ಸಂಘಟನೆಗೆ ನೀಡಿರುವ
ಭರವಸೆಯಂತೆ, NPS ಅನ್ನು ರದ್ದುಗೊಳಿಸಿ, OPS ಅನ್ನು ಜಾರಿಗೊಳಿಸುವಂತೆ
ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.

ಇದೇ ಸಂಧರ್ಭದಲ್ಲಿ ಕಾರ್ಯದರ್ಶಿ ಸುರೇಶ್, ನಾಗಭೂಷಣ, ರಂಗನಾಥ, ವಿಜಯ್ ಲಕ್ಣ್ಮಿ, ಬಸವರಾಜ್, ಸಿದ್ದೇಶ್ವರಿ, ಗಣೇಶ್, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!