ಪ್ಲೇ ಓವರ್ ಬದಲಾಗಿ ಮಳೆ ನೀರಿನ ಒಳ ಚರಂಡಿಗೆ ರಸ್ತೆ ಮಾಡಲು ಒಪ್ಪಿದ ಅಧಿಕಾರಿಗಳು

ಶಾಲಾ ಮಕ್ಕಳ ವಾಹನಕ್ಕೆ, ಅಂಬ್ಯೂಲೆನ್ಸ್ಗೆ ಇಲ್ಲದೆ ಇರುವ ಪ್ಲೇ ಓವರ್ ಭಾಗ್ಯ

ಏಕ ಕಾಲಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಸ್ಥಳಿಯರು.

ಪ್ಲೇ ಓವರ್‌ಗೆ ಮನವಿ ಮಾಡಲು ಬಂದ ವ್ಯಕ್ತಿಗೆ ಹಿಂದೆ ತಳ್ಳಿದ ಪೊಲೀಸರು

ಅಧಿಕಾರಿಗಳಿಗೆ ಶರತ್ತು ವಿಧಿಸಿ ಪ್ರತಿಭಟನೆ ಕೈಬಿಡಿಸಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಹೊಸಪೇಟೆಯಿಂದ ಬೆಂಗಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಮಾಡಲು ಹೊರಟ ಸರಕಾರ ರಸ್ತೆಯುದ್ದಕ್ಕೂ ಅಕ್ಕಪಕ್ಕದ ಗ್ರಾಮಗಳ ಮೂಲ ಸೌಕರ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಡರ್ ಪಾಸ್, ಪ್ಲೆ ಓವರ್, ಕಾಲುರಸ್ತೆ, ಮೇಲುಸೆತುವೆ, ಸರ್ವಿಸ್‌ರಸ್ತೆ ಈಗೇ ಅಲವು ಸೌಲಭ್ಯಗಳನ್ನು ಕಲ್ಪಿಸಬೇಕಾದ ಸಾಮಾನ್ಯ ಜ್ಞಾನವು ರಸ್ತೆ ನಿರ್ವಹಣೆ ಹೊತ್ತ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಪ್ರತಿಭಟನಾ ನಿರತರ ಮಾತಾಗಿತ್ತು.
ಹೌದು ಚಳ್ಳಕೆರೆ ತಾಲೂಕಿನಲ್ಲಿ ಹಾದು ಹೋದ ಈ ರಾಷ್ಟಿçÃಯ ಹೆದ್ದಾರಿ ನಗರದ ಅಕ್ಕಪಕ್ಕದ ಗ್ರಾಮಗಳನ್ನು ಗಮನದಲ್ಲಿರಿಸಿಕೊಂಡು ಅಂಡರ್ ಪಾಸ್, ಪ್ಲೇ ಓವರ್ ಕಲ್ಪಿಸಬೇಕಿತ್ತು, ಆದರೆ ಕೇಲವೊಂದು ಗ್ರಾಮಗಳಿಗೆ ಆ ಸೌಲಭ್ಯ ಕಲ್ಪಿಸದೆ ಇರುವುದಕ್ಕೆ ಸಿಟ್ಟಿಗೆದ್ದ ಸಾರ್ವಜನಿಕರು ರಾಷ್ಟಿçÃಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಚಳ್ಳಕೆರೆ ನಗರದಿಂದ ಹಾದು ಹೋಗುವ ವೀರದಿಮ್ಮನಹಳ್ಳಿ ಮೂಲಕ ಸುಮಾರು ಮೂವತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ಲೆ ಓವರ್ ಇಲ್ಲದೆ ಇರುವುದು ಅಫಘಾತಕ್ಕೆ ಆಹ್ವಾನ ನೀಡಿದಂತಿದೆ. ಇನ್ನೂ ನಮಗೆ ಸರ್ವಿಸ್ ರಸ್ತೆ ಮಾಡಿಕೊಡಿ ಎಂದು ಬೆಂಗಳೂರು ರಸ್ತೆ ಮಾರ್ಗದ ಸಿದ್ದಾಪುರ ಗ್ರಾಮದ ಸಾರ್ವಜನಿಕರ ಅಳಲಾಗಿತ್ತು.
ಈಗೇ ಏಕಕಾಕ್ಕೆ ಎರಡು ಕಡೆ ರಸ್ತೆ ತಡೆದು ಪ್ರತಿಭಟಿಸಿದ ಪ್ರತಿಭಟನಾಕಾರರ ಆಕ್ರೋಶ ಮುಗಿಲು ಮುಟ್ಟಿತು, ಇನ್ನೂ ಸ್ಥಳಕ್ಕೆ ಆಗಮಿಸಿದ ಸ್ಥಳಿಯ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಾಗೂ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ನಿರ್ಮಾಣೆ ಹೊಣೆಹೊತ್ತ ಅಧಿಕಾರಿಗಳು ಹಾಗೂ ಗೌರವ್, ಪಿಎನ್‌ಸಿ ಕಂಪನಿಯ ವ್ಯವಸ್ಥಾಪಕರು ಆಗಮಿಸಿ ಪ್ರತಿಭಟನಕಾರರನ್ನು ಮನಹೊಲಿಸಿ ಪ್ರತಿಭಟನೆ ಕೈಬಿಡುವಂತೆ ಮಾಡಿದರು.

ಕಳೆದ ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾದ ದಿನಗಳಿಂದ ಸತತವಾಗಿ ಹೋರಾಟ ಮಾಡುತ್ತಾ ಸಂಬAಧಿಸಿದ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಪತ್ರಗಳನ್ನು ನೀಡುತ್ತಾ ಪ್ಲೆ ಓವರ್ ಮಾಡಲು ಪ್ರತಿಭಟನೆ ಮಾಡುತ್ತಿದ್ದೆವೆ ಆದರೆ ಈಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವ ಅಂತಕ್ಕೆ ಬಂದಿದೆ ಆದರೆ ನಮಗೆ ಪ್ಲೆ ಓವರ್ ಭಾಗ್ಯ ದೊರೆಯಲಿಲ್ಲ. ಈಗ ಮಳೆ ನೀರಿಗಾಗಿ ಬಿಟ್ಟ ಒಳ ಚರಂಡಿ ಮೂಲಕ ರಸ್ತೆ ಮಾಡುತ್ತೆವೆ ಅದರಲ್ಲಿ ನಗರಕ್ಕೆ ಓಡಾಡಿ ಎನ್ನುತ್ತಾರೆ ಅಧಿಕಾರಿಗಳು. ಆದರೆ ದೊಡ್ಡ ದೊಡ್ಡ ವಾಹನಗಳು, ಶಾಲಾವಾಹನ, ಅಂಬ್ಯೂಲೇನ್ಸ್, ಲಾರಿಗಳು, ರೈತರ ಟ್ರಾಕ್ಟರ್‌ಗಳು ಸುಮಾರು ದಿನ ನಿತ್ಯ ನಾಲ್ಕು ಕಿಲೋಮೀಟರ್ ದೂರದವರೆಗೆ ಹೋಗಿ ಮರು ವಾಪಸ್ ಬರಬೇಕಿದೆ. ಇನ್ನೂ ಇವರ ದ್ವಂದ್ಚ ನಿಲುವಿಗೆ ಹಲವರು ಪ್ರಾಣ ಹೋಗುವ ಅನಿವಾರ್ಯವಿದೆ.
ಸುಮಾರು ಮೂವತ್ತು ಹಳ್ಳಿಗಳಿಗೆ ಈ ಪ್ಲೆ ಓವರ್ ಅವಶ್ಯಕತೆ ಇತ್ತು ಆದರೆ ಈ ಅವೈಜ್ಞಾನಿಕ ಒಳ ಚರಂಡಿ ಮಾರ್ಗದಲ್ಲಿ ಎಷ್ಟು ಪ್ರಾಣಗಳು ಅಪಘಾತದಲ್ಲಿ ಹೋಗುತ್ತವೆ ಎಂಬುದು ಆತಂಕವಾಗಿದೆ.
ವಾಹನ ಸವಾರನ ಮಾತು ಕೇಳಿಸಿಕೊಳ್ಳದ ಅಧಿಕಾರಿಗಳು
ಸ್ವಾಮಿ ನಿತ್ಯ ನಾವು ನಗರಕ್ಕೆ ಆಟೋ ತಂದು ಜೀವನ ಮಾಡಬೇಕು ಆದರೆ ವೀರದಿಮ್ಮಹಳ್ಳಿ ಮಾರ್ಗದ ರಾಷ್ಟಿçಯ ಮೂಲಕ ಚಳ್ಳಕೆರೆ ನಗರಕ್ಕೆ ಕೇವಲ ಮೂರಿಂದ ನಾಲ್ಕು ಕಿಲೋ ಆದರೆ ಪ್ರತಿ ನಿತ್ಯವೂ ಸಾರ್ವಜನಿಕರ ಅಂಗೈಯಲ್ಲಿ ಜೀವ ಹಿಡಿದ ಸಾಗಬೇಕಿದೆ. ಆದರೆ ಈ ಅವೈಜ್ಞಾನಿಕ ಒಳಚರಂಡಿ ರಸ್ತೆ ನಮಗೆ ಬೇಡ ಎಂದು ಹೇಳುವಾಗ ಮಾತುಗಳನ್ನು ಆಲಿಸದ ಅಧಿಕಾರಿಗಳು, ನಾಗರಾಜ್ ಎಂಬ ವ್ಯಕ್ತಿಯನ್ನು ಸ್ಥಳದಲ್ಲಿ ಇದ್ದ ಮುಖಂಡರು, ಹಾಗೂ ಪೊಲೀಸರು ಎಳೆದು ಆತನನ್ನು ಹೊರಗಡೆ ಕಳಿಸಿದರು ಪ್ರಸಂಗ ನಡೆಯಿತು.
ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ಸರ್ವೀಸ್ ರಸ್ತೆಯಿಲ್ಲದೆ ನೂರಾರು ವರ್ಷಗಳಿಂದ ಇದ್ದರಾಜ್ಯ ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೇರಿಸಿ ವಿಸ್ತೀರ್ಣಮಾಡಿರುವುದು ಸರಿಯಷ್ಟೆ ಸಿದ್ದಾಪುರ ಸಂಪರ್ಕ ಕಲ್ಪಿಸುವ ಸರ್ವೀಸ್ ರಸ್ತೆ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿರುವುದು ಸಿದ್ದಾಪುರ ಗ್ರಾಮಕ್ಕೆ ವಾಹನ ಸವಾರರು.
ವಿದ್ಯಾರ್ಥಿಗಳು ರೈತರು ದಿನನಿತ್ಯ ಚಳ್ಳಕೆರೆ ನಗರಕ್ಕೆ ಬರಬೇಕಾದರೆ ಅಪಘಾತದ ಭೀತಿಯಲ್ಲಿ ಸಂವರಿಸುವAತಾಗಿದ್ದು ಕೂಡಲೆ ಗ್ರಾಮಕ್ಕೆ ಸಂಚರಿಸಲುಸರ್ವೀಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸಿದ್ದಾಪುರ ಗ್ರಾಮದ ನೂರಾರು ಜನರು ರಸ್ತೆ ತಡೆ ನಡೆಸಿ ತೀವ್ರ ಅಕ್ರೋಶ ಹೊರ ಹಾಕಿದ್ದಾರೆ.
ಹೇಳಿಕೆ :
ಇಲ್ಲಿನ ಸ್ಥಳೀಯರು ಬೇಡಿಕೆಯಂತೆ ದಿನನಿತ್ಯ ಓಡಾಡಲು ಅವಶ್ಯಕವಾದ ಪ್ಲೆ ಓವರ್ ಅಗತ್ಯವಾಗಿದೆ, ಆದ್ದರಿಂದ ಇಲ್ಲಿ ಅಧಿಕಾರಿಗಳು ತುರ್ತಾಗಿ ಪ್ಲೆ ಓವರ್ ಮಾಡಿಸಲು ನಾನು ಕೂಡ ಸಂಬAದಿಸಿದ ಸಚಿವರುಗಳಿಂದÀ ಮಾತನಾಡಿದ್ದೆನೆ ತಾತ್ಕಲಿಕವಾಗಿ ರಸ್ತೆ ಮಾಡಿಸಲಾಗುತ್ತದೆ, ಸಾರ್ವಜನಿಕರು, ಬೈಕ್ ಸವಾರರು, ಓಡಾಡಲು ಅನುಕೂಲವಾಗುತ್ತದೆ, ಉಳಿದ ವಾಹನಗಳು ರಾಷ್ಟಿçÃಯ ಹೆದ್ದಾರಿ ಮೂಲಕ ನಗರಕ್ಕೆ ಆಗಮಿಸುತ್ತಾವೆ. –
ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ

Namma Challakere Local News
error: Content is protected !!