ತೊರೆಕೋಲಮ್ಮನಹಳ್ಳಿ ಅಂಗನವಾಡಿ ಬಿ. ಕೇಂದ್ರದಲ್ಲಿ ಸಕ್ಷಮ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದ .ಅಬ್ಬೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಪಾಪಮ್ಮ ಆನಂದಪ್ಪ,

ನಾಯಕನಹಟ್ಟಿ:: ಸಕ್ಷಮ ಅಂಗನವಾಡಿ ಕೇಂದ್ರ ಗ್ರಾಮದ ಪ್ರತಿಯೊಬ್ಬ ಮಕ್ಕಳಿಗೆ ಅನುಕೂಲವಾಗಲಿ ಎಂದು ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಹೇಳಿದ್ದಾರೆ.

ಗುರುವಾರ ಸಮೀಪದ ಅಬ್ಬೇನಹಳ್ಳಿ ಗ್ರಾ. ಪಂ.
ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದ ಅಂಗನವಾಡಿ .ಬಿ. ಕೇಂದ್ರದಲ್ಲಿ ನೂತನ ಸಕ್ಷಮಾ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಗ್ರಾಮದ ಪ್ರತಿಯೊಬ್ಬರಿಗೂ ಈ ಸೌಲಭ್ಯವು ಸಿಗುವಂತಾಗಲಿ ಎಂದರು.

ಇನ್ನೂ ಅಂಗನವಾಡಿ ಬಿ ಕೇಂದ್ರದಲ್ಲಿ ಸಕ್ಷಮಾ ಅಂಗನವಾಡಿ ಉದ್ಘಾಟನೆ ನಂತರ ಕ್ರಾಫ್ಟ್ ಶಿಬಿರ ಇಸಿಸಿ ದಿನಾಚರಣೆ ತಾಯಿಯ ಹೆಸರಲ್ಲಿ ಗಿಡ ನೆಟ್ಟು. ಮಕ್ಕಳು ತಾಯಂದಿರು ಪುಟಾಣಿ ಮಕ್ಕಳು ಕಾರ್ಯಕ್ರಮವನ್ನು ಮಾಡಲಾಯಿತು

ಈ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಗಾದ್ರಪ್ಪ, ಮಾರಕ್ಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಸಹ ಶಿಕ್ಷಕ ಲಿಂಗರಾಜ್, ಅಬ್ಬೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಊರಿನ ಗ್ರಾಮಸ್ಥರಾದ ಈರಣ್ಣ, ರೇವಪ್ಪ, ಅಂಗನವಾಡಿ ಎ ಮತ್ತು ಬಿ ಕೇಂದ್ರದ ಶಿಕ್ಷಕಿರಾದ ಟಿ.ಮಂಜುಳಾ, ಎಸ್. ಗೀತಾ, ‌ ಆಶಾ ಕಾರ್ಯಕರ್ತೆ ರತ್ನಮ್ಮ, ಅಂಗನವಾಡಿ ಸಹಾಯಕಿಯರಾದ ಗಂಗಮ್ಮ, ತಿಪ್ಪಮ್ಮ, ಸಮಸ್ತ ತೂರೆಕೊಲಮನಹಳ್ಳಿ ಗ್ರಾಮದ ಊರಿನ ಗ್ರಾಮಸ್ಥರು ಹಾಜರಿದ್ದರು

Namma Challakere Local News
error: Content is protected !!