ಚಳ್ಳಕೆರೆ :
ಮೊಳಕಾಲ್ಕೂರಿನಲ್ಲಿ ಬಿದ್ದ ಮಳೆ: ಶೇಂಗಾ ಬೆಳೆ
ಹಾಳಾಗುವ ಆತಂಕ ದೂರ
ಮೊಳಕಾಲೂರು ತಾಲೂಕಿನಲ್ಲಿ ಹಸಿ ಮಳೆಯಾಗಿದ್ದು, ರೈತರ
ಮೊಗದಲ್ಲಿ ಸಂತಸವನ್ನು ತಂದಿದೆ. ನೂರಾರು ಎಕರೆಯಲ್ಲಿ ಶೇಂಗಾ
ಬಿತ್ತನೆ ಮಾಡಿದ್ದು, ಶೇಂಗಾ ಒಣಗಿ ಹೋಗುವ ಅತಂಕದಲ್ಲಿ ರೈತರು
ಇದ್ದಿದ್ದು,
ಇದೀಗ ಇಂದು ಬಿದ್ದ ಹಸಿ ಮಳೆಯಿಂದಾಗಿ ಶೇಂಗಾ
ಬೆಳೆ ಚೇತರಿಸಿಕೊಂಡಿದೆ.
ಶೇಂಗಾ ಬೆಳೆಗೆ ಉತ್ತಮ ನೀರು ಸಿಕ್ಕಿದೆ.
ಇದರಿಂದ ರೈತರಲ್ಲಿ ಮನೆ ಮಾಡಿದ್ದ ಆತಂಕ ದೂರವಾಗಿದೆ.
ಸಣ್ಣ ಪುಟ್ಟ ಕೆರೆ ಕಟ್ಟೆಗಳು ಚೆಕ್ ಡ್ಯಾಂ ಗಳು ಕೂಡ ಸ್ವಲ್ಪ ಮಟ್ಟಿಗೆ
ಭರ್ತಿಯಾಗಿದೆ ಎಂದು ರೈತ ನಾಗರಾಜ್ ಹೇಳಿದರು.