ಚಳ್ಳಕೆರೆ :
ಮೊಬೈಲ್ ಆಫ್ ಹಾಗೂ ಕೆಲಸ ಒತ್ತಡ ವಿರೋಧಿಸಿ
ತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ
ಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಲಿದ್ದಾರೆ.
ಕೇಂದ್ರ
ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ತಾಲೂಕಿನ
ಗ್ರಾಮಾಡಳಿತ ಅಧಿಕಾರಿಗಳ ಮೂಲಕ
ಮೊಬೈಲ್ ಆಫ್ ಗಳ ಒತ್ತಡ ಹೇರುತ್ತಿದ್ದು ಅದಕ್ಕೆ ಮೂಲಭೂತ
ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ
ವಿವಿಧ ಸೇವಾ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಹಾಗೂ ಇತರೆ
ಬೇಡಿಕೆಗಳು ಈಡೇರುವವರೆಗೂ
ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲು ನಿರ್ಧರಿಸಲಾಗಿರುತ್ತದೆ.
ಮೇಲ್ಕಂಡಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ
ಬೇಡಿಕೆಗಳು
ಹಾಗೂ ಸಮಸ್ಯೆಗಳು ಈಡೇರುವವರೆಗೆ ಸೆ:26 ರಂದು ಮುಷ್ಕರವನ್ನು
ನಡೆಸಲು
ಚಳ್ಳಕೆರೆ ತಾಲ್ಲೂಕು ಕಛೇರಿ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ
6
ಗಂಟೆಯವರೆಗೆ ಅಧ್ಯಕ್ಷರು, ಗ್ರಾಮ ಆಡಳಿತ ಅಧಿಕಾರಿಗಳ ಸಂಘ(ರಿ)
ತಾಲ್ಲೂಕು ಘಟಕವತಿಯಿಂದ
50 ಜನ ಗ್ರಾಮ ಆಡಳಿತ ಅಧಿಕಾರಿಗಳು
ಶಾಂತಿಯುತವಾಗಿ ಶಾಮಿಯಾನದ ಕೆಳಗೆ ಕುಳಿತು ಕಪ್ಪು ಪಟ್ಟಿ ಧರಿಸಿ
“ಶಾಂತಿಯುತ
ಪ್ರತಿಭಟನೆ” ನಡೆಸಲು ಮುಂದಾಗಿದ್ದಾರೆ.
ಇನ್ನೂ ಚಳ್ಳಕೆರೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.