ಚಳ್ಳಕೆರೆ :
ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಬೇಕಾದರೆ ರಾಜೀನಾಮೆ
ಕೊಡಲಿ
ರಾಜ್ಯದ ಮುಡಾ ಹಗರಣದ ವಿಚಾರಕ್ಕೆ ಹೈಕೋರ್ಟ್ ನೀಡಿರುವ
ತೀರ್ಪು ನಿರೀಕ್ಷಿತ ತೀರ್ಪು ಇದು ಸಿದ್ದರಾಮಯ್ಯ ಅವರಿಗೆ
ಮೊದಲೇ ಗೊತ್ತಿತ್ತು ಎನಿಸುತ್ತದೆ ಎಂದು
ಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಿದ್ದರಾಮಯ್ಯ
ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕೆಂದರೆ ಕೂಡಲೇ ರಾಜೀನಾಮೆ
ಕೊಡಬೇಕು.
ಸಿದ್ದರಾಮಯ್ಯ ಅವರಿಗೆ ತಾವು ತಪ್ಪು
ಮಾಡಿರುವುದು ಮನವರಿಕೆಯಾಗಿತ್ತು. ಆದ್ದರಿಂದ ಕಳೆದ ಒಂದು
ತಿಂಗಳಿಂದ ಟೆಂಪಲ್ ರನ್ ಮಾಡಿದ್ದರು ಎಂದರು.