ಪರಿಹಾರ ನೀಡಲು ಅರ್ಹತೆ ಇದ್ದರೆ ರೈತರಿಗೆ ಪರಿಹಾರ ಕೊಡಿಸಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ರೈತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಅವರಿಗೆ ಪರಿಹಾರ ನೀಡಲು ಅರ್ಹತೆ ಇದ್ದರೆ ಅಧಿಕಾರಿಗಳು ಸರಿಯಾದ ವರದಿ ಸಲ್ಲಿಸಿ ಪರಿಹಾರ ಬರುವಂತೆ ಕ್ರಮವಹಿಸಿ ಎಂದು ಶಾಸಕ ಟಿ.ರಘುಮೂರ್ತಿ ಸೂಚಿಸಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿರು. ಈ ಬಾರಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ, ಆದ್ದರಿಂದ ರೈತರು ಈಗಾಗಲೇ ಬಿತ್ತನೆ ಮಾಡಿದ್ದು ಶೇ.50 ರಷ್ಟು ಶೇಂಗಾ ಕೈಗೆ ಬಾರದೆ ಇರುವ ಸ್ಥಿತಿ ಇದೆ ಆದ್ದರಿಂದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡದಿದ್ದರೆ ಸರಕಾರ ಹಾಗೂ ಶಾಸಕರ ಭಯವಿಲ್ಲ ಎಂದು ಜನರು ಬೈಯುತ್ತಾರೆ, ಆಗಬಾರದು. ಸರಕಾದ ಯೋಜನೆಗಳನ್ನು ನೀಡಿದವರಿಗೆ ನೀಡದೆ ಅರ್ಹರನ್ನು ಗುರುತಿಸಿ ನೀಡಬೇಕು.
ವಸತಿ ನಿಲಯಗಳಲ್ಲಿ ಶೌಚಲಾಯಗಳು ಸ್ವಚ್ಚತೆ ಇದ್ದರೆ ಎಲ್ಲವೂ ಸ್ವಚ್ಚವಿದ್ದಂತೆ, ಆಹಾರ ರುಚಿ, ಶುಚಿ ಬಗ್ಗೆ ಗಮನಹರಿಸಬೇಕು ವಾರಕ್ಕೆ ಒಮ್ಮೆಯಾದ ವಿಕ್ಷಣೆ ಮಾಡಬೇಕು ಎಂದು ಬಿಸಿಎಂ. ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಅನಾವುತ ಸಂಭವಿಸಿದರೇ ನೇರವಾಗಿ ಅಧಿಕಾರಿಗಳೆ ಹೊಣೆಗಾರಿಕೆಯಾಗುತ್ತೀರಿ ಎಂದರು.
ದೇವರ ಎತ್ತಗಳು ಇರುವ ಎಲ್ಲಾ ಗ್ರಾಮಗಳನ್ನು ಟ್ರಸ್ಟಗಳಾಗಿ ಮಾಡಿಸಬೇಕಉ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್, ತಹಶಿಲ್ದಾರ್ ರೇಹಾನ್ ಪಾಷ, ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷಪ್ಪ, ಪಶು ಅಧಿಕಾರಿ ರೇವಣ್ಣ, ಅರಣ್ಯ ಇಲಾಖೆ ಅಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ನಿತೀನ್, ಪಿಡ್ಯೂ ಅಧಿಕಾರಿ ವಿಜಯ್ ಬಾಸ್ಕ್ರ್, ಹಾಗೂ ಕೆಡಿಪಿ ನಾಮನಿರ್ದೇಶನ ಸದಸ್ಯ ಎಂ.ರಮೇಶ್, ಎಸ್.ಬಿ.ವಿಶ್ವನಾಥ್ ರೆಡ್ಡಿ, ನೇತ್ರಾವತಿ. ಸುರೇಶ್, ಇತರರು ಇದ್ದರು.