ಚಳ್ಳಕೆರೆ :
ಬದರಿನಾಥ್ ಕೈಬಿಡುವಂತೆ ಒತ್ತಾಯಿಸಿ ಮನವಿ ನೀಡಿದ
ಹಿಂದಿನ ಸಮಿತಿ
ಹಿಂದೂ ಮಹಾಗಣಪತಿ ಸಮಿತಿಯ ಮಾರ್ಗದರ್ಶಕ ಬದರಿನಾಥ್
ಅವರನ್ನು ಸಮಿತಿಯಿಂದ ಕೈ ಬಿಡಬೇಕೆಂದು, ಹಿಂದಿನ ಸಮಿತಿಯ
ಮುಖಂಡರು ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ
ಗುರುವಾರ ಸಂಜೆ ಮನವಿ ನೀಡಿದರು.
ಇದೇ ಸಮಯದಲ್ಲಿ
ಮಾತಾಡಿದ ಎಸ್ ಬಿಎಲ್ ಮಲ್ಲಿಕಾರ್ಜುನ್, ಬದರಿನಾಥ್ ಕೇವಲ
ಮಾರ್ಗ ದರ್ಶಕರಾಗಿ ಮಾತ್ರ ಕೆಲಸ ಮಾಡದೆ, ಹಿಂದೂ ವಿರೋಧಿ
ಕೆಲಸಗಳನ್ನು ಮಾಡುತ್ತಿದ್ದಾರೆ.
ಹಿಂದಿನ ಸಮಿತಿ ಕಾರ್ಯಕರ್ತರನ್ನು
ಗಣನೆಗೆ ತೆಗೆದುಕೊಳ್ಳದೆ, ತಾವೇ ಎಲ್ಲಾ ನಿರ್ಣಯಗಳನ್ನು
ಮಾಡುತ್ತಾರೆಂದು ಆರೋಪಿಸಿದರು.