ಚಳ್ಳಕೆರೆ : ನೀರು ಹಾಯಿಸಲು ಹೋಗಿದ್ದ ದಂಪತಿಗಳ ಕೊಲೆ
ನೀರು ಹಾಯಿಸಲು ಹೋಗಿದ್ದ ದಂಪತಿಗಳನ್ನು ಕೊಚ್ಚಿ
ಕೊಂದಿರುವ ಘಟನೆ ಚಳ್ಳಕೆರೆ ಕ್ಷೇತ್ರದ ತುರುವನೂರಿ ನಲ್ಲಿ
ನಡೆದಿದೆ.
ತುರುವನೂರು ಠಾಣೆ ವ್ಯಾಪ್ತಿಯ ಬೊಮ್ಮಕ್ಕನ ಹಳ್ಳಿಯ
ಹನುಂಮತಪ್ಪ ಹಾಗೂ ತಿಪ್ಪಮ್ಮ ಕೊಲೆಗೀಡಾಗಿರುವ ದಂಪತಿ.
ಜಮೀನಿನಲ್ಲಿ ಈರುಳ್ಳಿ ಬೆಳೆಗೆ ನೀರು ಹಾಯಿಸಲು ಹೋದಾಗ
ಈ ಭೀಕರ ಘಟನೆ ನಡೆದಿದೆ.
ಕೊಲೆಗೆ ಕಾರಣವೇನು, ಕೊಲೆ
ಮಾಡಿದವರು ಯಾರು ಎಂದು ಇದುವರೆಗು ತಿಳಿದು ಬಂದಿಲ್ಲ.
ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿ
ಪ್ರಕರಣ ದಾಖಲಿಸಿಕೊಂಡಿದ್ದಾರೆ.