ಚಳ್ಳಕೆರೆ :
ಪೊಲೀಸ್ ಸಮೇತ ಬ್ಯಾರಿಕೇಡ್ ತಳ್ಳಿದ ರೈತ ಸಂಘದ
ಕಾರ್ಯಕರ್ತರು
ಭದ್ರತೆಗಾಗಿ ಯಾವುದೇ ಪ್ರತಿಭಟನಾಕಾರರು ಚಿತ್ರದುರ್ಗ
ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬರದಂತೆ ಬ್ಯಾರಿಕೇಡ್
ಹಾಕಲಾಗಿದೆ.
ಆದರೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ರಾಜ್ಯ ರೈತ
ಸಂಘದ ಕಾರ್ಯಕರ್ತರು ಪೊಲೀಸರ ಸಮೇತ ತಳ್ಳಿಕೊಂಡು
ಆವರಣದೊಳಗೆ ನುಗ್ಗಿದ ಘಟನೆ ಗುರುವಾರ ನಡೆಯಿತು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ
ಆವರಣದವರೆಗೆ ಪ್ರತಿಭಟನೆಯಲ್ಲಿ ಬಂದು ಸರ್ಕಾರದ ವಿರುದ್ಧ
ಘೋಷಣೆಗಳನ್ನು ಹಾಕಿದರು.
ಅಯ್ಯಯ್ಯೋ ಅನ್ಯಾಯ ಎಂದು
ಬೊಬ್ಬೆ ಹೊಡೆದಿದ್ದು ಕಂಡು ಬಂತು.