ಚಳ್ಳಕೆರೆ :
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಹೈರಾಣು
ಅನ್ನಭಾಗ್ಯ ಯೋಜನೆಗೆ ಕುತ್ತು : ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಸರಕಾರ ಉಚಿತವಾಗಿ ಅನ್ನಭಾಗ್ಯ ಯೋಜನೆ ನೀಡಿದರು ಅದನ್ನು ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ದಿನವೀಡಿ ಕಾಯುತ್ತಾ ಕುಳಿತ ಪಡಿತರ ಚೀಟಿದಾರರು.
ಹೌದು ರಾಜ್ಯ ಸರಕಾರವು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಪಣತೊಟ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರು ತಮ್ಮ ಅಧಿಕಾರಿಕ್ಕೆ ಬರುವ ಮುನ್ನವೇ ಹಸಿವು ಮುಕ್ತ ರಾಜ್ಯಕ್ಕೆ ಅನ್ನಭಾಗ್ಯ ಯೋಜನೆಯನ್ನು ನೀಡುತ್ತೇನೆ,
ಇದರಿಂದ ರಾಜ್ಯದ ಯರೋಬ್ಬರು ಕೂಡ ಹಸಿವಿನಿಂದ ಬಳಲುಬಾರದು ಎಂದು ಉಚಿತವಾಗಿ ಅಕ್ಕಿ ನೀಡುವುದರ ಜೊತೆಗೆ ಬಡವರ ಬಾಳಿಗೆ ನಂದದೀಪವಾಗಿದ್ದಾರೆ.
ತಾಲೂಕಿನಲ್ಲಿ ಒಂದಿಲ್ಲೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಸಮಸ್ಯೆ ತಲೆದೂರತ್ತಲೆ ಇವೆ, ಆದರೆ ಮೌನ ವಹಿಸಿದ ಆಹಾರ ಇಲಾಕೆಯ ಶಿರಸ್ತೆದಾರ್
ಅನ್ನಭಾಗ್ಯ ಅಕ್ಕಿಗಾಗಿ ರಾತ್ರಿಯೀಡಿ ಕಾಯುವ ಸಾರ್ವಜನಿಕರು ಎಂಬ ವರದಿಗಳು ಕೂಡ ಕಳೆದ ದಿನಗಳಲ್ಲಿ ವರದಿಯಾಗಿದ್ದವು.
ಇನ್ನೂ ಅದೇ ರೀತಿಯಲ್ಲಿ ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿ ಗ್ರಾಮದ ಪಡಿತರ ವಿತರಣೆ ಕೇಂದ್ರದಲ್ಲಿ ತಿಂಗಳಿಗೆ ಕೇವಲ ಎರಡು ದಿನ ಮಾತ್ರ ಅಕ್ಕಿ ವಿತರಣೆ ಮಾಡಿದರೆ ಉಳಿದ ದಿನ ಖಾಲಿಯಾಗಿದೆ ಎಂಬ ಉತ್ತರ ಸಿಗುತ್ತೆ, ಈಗೇ ಪ್ರತಿ ತಿಂಗಳು ಅಕ್ಕಿ ಇಲ್ಲದೆ ಎಷ್ಟೋ ರಾತ್ರಿಗಳು ಕಳೆದಿದ್ದೆವೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾಲೂಕು ಶಿರಸ್ತೆದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಇದರಿಂದ ಅಧಿಕಾರಿಗಳು ಅಧಿಕಾರದ ಕುರ್ಚಿಯನ್ನು ಬಿಟ್ಟು ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ಬೇಟಿ ನೀಡಿದರೆ ಮಾತ್ರ ಸಾರ್ವಜನಿಕರ ಸಮಸ್ಯೆ ಪರಿಹಾರವಾಗುತ್ತೆ ಇಲ್ಲವಾದರೆ ವಯೋ ವೃದ್ದರು, ವಿಕಲ ಚೇತನರು ಕಾರ್ಮಿಕರು , ಈಗೇ ಕೂಲಿ ಬಿಟ್ಟು ತಮ್ಮ ಅಕ್ಕಿಗಾಗಿ ಕಾಯುವ ಪರಸ್ಥಿತಿ ಬಂದೊದಗಿದೆ.
ಇನ್ನಾದರೂ ಅನ್ನಭಾಗ್ಯ ಯೋಜನೆ ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ದೊರಕುವುದೊ ಕಾದು ನೋಡಬೇಕಿದೆ.