ಚಳ್ಳಕೆರೆ : ತಾಲ್ಲೂಕಿನ ಮತ್ಸಮುದ್ರ ಗ್ರಾಮದಲ್ಲಿ ಕರಡಿ
ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಮತ್ಸಮುದ್ರಗ್ರಾಮದ
ಹೊರವಲಯದ ತೋಟದಲ್ಲಿ ಕರಡಿಯೊಂದು
ಓಡಾಡಿದ್ದನ್ನು ಗ್ರಾಮದ ನಾಗರಾಜಪ್ಪ, ಚಂದ್ರಪ್ಪ
ಎಂಬುವವರು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ಧಾರೆ.

ಚಂದ್ರಪ್ಪ ತನ್ನ ಮೇಕೆಗಳನ್ನು ಮೇಯಿಸುವ
ಸಂದರ್ಭದಲ್ಲಿ ದೂರದಲ್ಲಿ ಕರಡಿ ಕಾಣಿಸಿಕೊಂಡಿದೆ,
ನಾಗರಾಜಪ್ಪ ತನ್ನ ತೋಟದ ಜಮೀನಿಗೆ ಹೋಗುವಾಗ
ಕರಡಿಯನ್ನು ಕಂಡಿದ್ಧಾನೆ. ಮಲ್ಲಪ್ಪನವರ
ಬಾಳೆತೋಟ, ಅಂಜಿನಪ್ಪನವರ ಪಪ್ಪಾಯಿ ಜಮೀನಿನಲ್ಲಿ ಓಡಾಟ
ನಡೆಸಿದ್ದು ಕಂಡುಬಂದಿದೆ.

ಕೂಡಲೇ ಗ್ರಾಮದಲ್ಲಿ
ಸುದ್ದಿ ಹರಡಿ ಹತ್ತಾರು ಯುವಕರು ಕೈಯಲ್ಲಿ
ಕೋಲು, ದೊಣ್ಣೆ ಹಿಡಿದು ಕರಡಿಯ ಹುಡುಕಾಟ
ನಡೆಸಿದ್ದಾರೆ. ಕರಡಿಯ ಹೆಜ್ಜೆಗಳನ್ನು ಸಹ
ಗುರತಿಸಿದ್ದಾರೆ, ಆದರೆ ಕರಡಿ ಮಾತ್ರ ಯುವಕರ
ಕಣ್ಣಿಗೆ ಕಂಡಿಲ್ಲ.
ಕಳೆದ ತಿಂಗಳು ಓಬಳಾಪುರ ಗ್ರಾಮದ
ಹೊರವಲಯದಲ್ಲಿ ಎಮ್ಮೆ ಮೇಯಿಸುವ ಸಂದರ್ಭದಲ್ಲಿ
ಓಂಕಾರಪ್ಪ(55) ಎಂಬುವವರ ಮೇಲೆ ದಾಳಿ ನಡೆಸಿದ್ದು,
ಚಿಕಿತ್ಸೆ ಫಲಕಾರಿಯಾಗದೆ ಓಂಕಾರಪ್ಪ ಚಿತ್ರದುರ್ಗದ
ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಈ ಘಟನೆ ಮಾಸುವ
ಮುನ್ನವೇ ಮತ್ತೆ ಚಳ್ಳಕೆರೆ ತಾಲ್ಲೂಕಿನ ಗ್ರಾಮೀಣ
ಭಾಗದಲ್ಲಿ ಕರಡಿ ಓಡಾಟ ಆರಂಭವಾಗಿದ್ದು, ಅರಣ್ಯ ಇಲಾಖೆ
ಸಿಬ್ಬಂದಿ ಕೂಡಲೇ ಕರಡಿಯನ್ನು ಸೆರೆ ಹಿಡಿಯುವಂತೆ
ಗ್ರಾಮದ ಯುವಕರು ಒತ್ತಾಯಿಸಿದ್ಧಾರೆ.

About The Author

Namma Challakere Local News
error: Content is protected !!