ಚಳ್ಳಕೆರೆ :
ನ್ಯಾಯಾಲಯದಲ್ಲಿ ಒಂದಾದ ಮೂರು ಜೋಡಿಗಳು
ಚಿತ್ರದುರ್ಗದ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್
ಅದಾಲತ್ ನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಂಪತಿಗಳು
ಒಂದಾದರು.
ಕಾರಣಾಂತರಗಳಿಂದ ನ್ಯಾಯಾಲಯಗಳಲ್ಲಿ
ದಾಖಲಾಗಿದ್ದ ಪ್ರಕರಣಗಳು ರಾಜೀ ಮುಖಾಂತರ ಸುಖಾಂತ್ಯ
ಕಂಡವು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ
ನ್ಯಾಯಾಲಯದಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿ ದಾಖಲಾದ
ಒಂದು ಪ್ರಕರಣ ಹಾಗೂ 2023ನೇ ಸಾಲಿನ ದಾಖಲಾದ
ಒಂದು ಪ್ರಕರಣ ಹಾಗೂ 1ನೇ ಹೆಚ್ಚುವರಿ ಹಿರಿಯ ಸಿವಿಲ್
ನ್ಯಾಯಾಲಯದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.