ಚಳ್ಳಕೆರೆ :
ಹಿಂದು ಮಹಾಗಣಪತಿ ಸಮಿತಿಯಲ್ಲಿ ಹಿಂದು
ಕಾರ್ಯಕರ್ತರ ಕಿತ್ತಾಟ
ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಸಮಿತಿ, ಮಾಜಿ ಅಧ್ಯಕ್ಷರು
ಹಾಗು ಹಾಲಿ ಸಮಿತಿಯ ಮಾರ್ಗದರ್ಶಕ ಬದರಿನಾಥ್ ರನ್ನು
ಸಮಿತಿ ಒಳಗೆ ಇಟ್ಟುಕೊಳ್ಳಬಾರದೆಂದು ಒತ್ತಾಯಿಸಿ, ಹಿಂದು
ಕಾರ್ಯಕರ್ತರು ಹಾಗು ಮಾಜಿ ಅಧ್ಯಕ್ಷರ ಗುಂಪು ಆರ್ ಎಸ್
ಎಸ್ ಕಚೇರಿಯಲ್ಲಿ ಆಗ್ರಹಿಸಿದ ಘಟನೆ ನಡೆಯಿತು.
ನಂತರ
ಹಿಂದೂ ಮಹಾಗಣಪತಿ ಪೆಂಡಾಲ್ ಬಳಿ ಬಂದು ಗಲಾಟೆ ಮಾಡಿ,
ವೇದಿಕೆಯಲ್ಲಿದ್ದ ಬದರಿನಾಥ್ ರನ್ನು ಕೆಳಗಿಳಿಸಿದರು.
ಇಲ್ಲಿ ಬೇರೆ
ಬೇರೆ ಗುಂಪುಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ರೀ ಮಾದಾರ
ಚನ್ನಯ್ಯ ಶ್ರೀಗಳ ಬಳಿ ಅಸಮಾಧಾನ ಹೊರ ಹಾಕಿದರು.