ಚಳ್ಳಕೆರೆ : ಮರಕ್ಕೆ ಕಾರು
ಡಿಕ್ಕಿಯಾಗಿ, 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ
ನಡೆದಿದೆ.
ಸಂಬಂಧಿಕರೊಬ್ಬರ
ಅಂತ್ಯ ಕ್ರಿಯೆ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ಈ
ದುರ್ಘಟನೆ ನಡೆದಿದೆ.
ಚಿತ್ರದುರ್ಗ – ಚಳ್ಳಕೆರೆ ಮಧ್ಯದ
ಕಲ್ಲಹಳ್ಳಿಯ ಬಳಿ ಈ ಅಪಘಾತ ನಡೆದಿದ್ದು, ಮಗು
ಸಾವನ್ನಪ್ಪಿದ್ದು ಇಬ್ಬರಿಗೆ ಗಾಯವಾಗಿದೆ.
2 ವರ್ಷದ ಕಿಶನ್ ಎಂಬ ಮಗು ಸಾವನ್ನಪ್ಪಿದೆ.
ಗಾಯಗೊಂಡವರಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ
ನೀಡಲಾಗುತ್ತಿದೆ.
ಇನ್ನು ಅಪಘಾತವಾದ ಕಾರು ಅನಿಲ್
ಎಂಬವರಿಗೆ ಸೇರಿದ್ದಾಗಿದೆ. ಅನಿಲ್, ಪೊಲೀಸ್
ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು
ರಾಮಜೋಗಿಹಳ್ಳಿಯವರು. ಸಂಬಂಧಿಯೊಬ್ಬರ ಅಂತ್ಯ
ಸಂಸ್ಕಾರ ಮುಗಿಸಿ ಮನೆಗೆ ಮರಳುತ್ತಿದ್ದರು. ಆದರೆ ಈ ವೇಳೆ
ಇಂಥ ಅಪಘಾತ ಸಂಭವಿಸಿ ಮಗು ಸಾವನ್ನಪ್ಪಿದೆ.
ಅನಿಲ್ ತಮ್ಮ ಕಾರಿನಲ್ಲಿ ಸಹೋದರಿ ಮಾನಸ, ಹಾಗೂ
ಕಿಶನ್ ಜೊತೆಗೆ ಚಿತ್ರದುರ್ಗಕ್ಕೆ ಬಂದಿದ್ದರು.ವಾಪಸ್ ಊರಿಗೆ
ತೆರಳುತ್ತಿದ್ದ ವೇಳೆ ಕಲ್ಲಹಳ್ಳಿ ಬಳಿ ಕಾರು ಮರಕ್ಕೆ
ಡಿಕ್ಕಿಯಾಗಿದೆ.
ಗಾಯಾಳುಗಳಿಗೆ ಜಿಲ್ಲಾಸ್ಪತ್ರೆ ಹಾಗೂ
ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆ
ಪುಟ್ಟ ಕಂದಮ್ಮನ ಸಾವಿಗೆ ಕುಟುಂಬದವರ ಆಕ್ರಂದನ
ಮುಗಿಲು ಮುಟ್ಟಿದೆ.