ಚಳ್ಳಕೆರೆ :
ಕುಡುಕರ ಅಡ್ಡೆಯಾದ ಉರ್ದು ಶಾಲೆ ಆವರಣ : ಕಂಡು ಕಾಣದಂತೆ ಇರುವ ಬಿಇಓ
ಚಳ್ಳಕೆರೆ ನಗರದ ಉರ್ದು ಶಾಲೆಯ ಆವರಣ ಈಗ ಕುಡುಕರ
ಅಡ್ಡೆಯಾಗಿದೆ.
ಈ ಬಗ್ಗೆ ಕೆ ಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಬೋಜರಾಜ್
ಅವರು ಮಾತನಾಡಿ ಶಾಲಾ ಆವರಣದಲ್ಲಿ ಸ್ವಚ್ಚತೆ
ಮರಿಚೀಕೆಯಾಗಿದೆ.
ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲೆ ಇದೆ ಆದರೆ ಸಂಜೆಯಾದರೆ ಸಾಕು ಕುಡುಕರ ಗುಂಪುಗಳು, ಸೇರಿಕೊಂಡಿ ಪಾರ್ಟಿ ಮಾಡುತ್ತಾರೆ.
ಇನ್ನೂ
ಸಂಜೆ ಶಾಲೆ ಬೀಗ ಹಾಕಿದರೆ, ಕುಡಿದು
ಬಿಸಾಡಿದ ಖಾಲಿ ಬಾಟಲಿಗಳು, ಸೇದಿ ಬಿಸಾಡಿದ ಸಿಗರೇಟ್
ಗಳು ತುಂಡುಗಳು ಕಾಣಿಸುತ್ತವೆ.
ಶಾಲೆಯ ಹಿಂಭಾಗದಲ್ಲಿ
ಅನೈತಿಕ ತಾಣವಾಗಿದೆ.
ಕ್ಷೇತ್ರ ಶಿಕ್ಷಣಾದಿಕಾರಿಗಳು ಕಛೇರಿ ಆವರಣದಲ್ಲಿ ಇಂತಹ ಘಟನೆಗಳು ಜರುಗಿದರು ಇಲ್ಲಿನ ಬಿಇಓ ಮಾತ್ರ ಮೌನ ವಹಿಸಿದ್ದಾರೆ
ಉಡಾಫೆಯಲ್ಲಿ ತಾತ್ಸರ ಮನೋದೋರಣೆ ತೋರುತ್ತಾರೆ ಈಗೇ ಆದರೆ ತಾಲೂಕಿನಲ್ಲಿ ಇರುವ ಶಾಲೆಗಳ ಪರಿಸ್ಥಿತಿ ಏನು ಎಂಬುದು ಪೋಷಕರು ಯಕ್ಷ ಪ್ರಶ್ನೆಯಾಗಿದೆ.
ಕುಡುಕರ
ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು
ಆಗ್ರಹಿಸಿದ್ದಾರೆ.