ಶ್ರೀ ಗಣೇಶನಿಗೆ ಭಕ್ತಿ ಭಾವ ಮೆರೆದ ಮಲ್ಲೂರಹಳ್ಳಿ ದೊಡ್ಡ ಮಲ್ಲಯ್ಯನ ಕಪಿಲೆ ಗ್ರಾಮಸ್ಥರು ಗುತ್ತಿಗೆದಾರ ಮಲ್ಲಯ್ಯ.
ನಾಯಕನಹಟ್ಟಿ ಹೋಬಳಿ ಮಲ್ಲೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಮಲ್ಲಯ್ಯನ ಕಪಿಲೆ ಶ್ರೀ ಗಣಪತಿ ಬಳಗ ವತಿಯಿಂದ ಶ್ರೀ ಗಣಪತಿ ಪ್ರತಿಷ್ಠಾಪಿಸಲಾಯಿತು.
ಶ್ರೀ ಗಣಪತಿಯನ್ನು ಸತತ ಐದು ದಿನಗಳ ಕಾಲ ತರತರದ ಅಡಿಗೆ ಮಾಡಿ ನೈವೇದ್ಯ ಸಲ್ಲಿಸಿ ಮೋದಕ ಪ್ರಿಯ ಶ್ರೀ ಗಣೇಶನಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ ಎಂದು ಗುತ್ತಿಗೆದಾರ ಮಲ್ಲಯ್ಯ ಹೇಳಿದ್ದಾರೆ.
ಬುಧವಾರ ಸಂಜೆ 5:00 ಗಂಟೆಗೆ ವೇಳೆ ಮಲ್ಲೂರಹಳ್ಳಿ ದೊಡ್ಡ ಮಲ್ಲಯ್ಯನ ಕಪಿಲೆ ಬಳಗದ ವತಿಯಿಂದ ಶ್ರೀ ಗಣಪತಿ ವಿಸರ್ಜನಾ ಕಾರ್ಯದಲ್ಲಿ ಪಾಲ್ಗೊಂಡರು.
ಇನ್ನೂ ಗ್ರಾಮದ ಹೊರವಲಯದಲ್ಲಿರುವ ಹಳ್ಳಕ್ಕೆ ದೊಡ್ಡಮಲ್ಲಯ್ಯನ ಕಪಿಲೆ ಗಣಪತಿಯನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಯುವಕರು ಕುಣಿದು ಕುಪ್ಪಳಿಸುತ್ತಾ ಗಣಪತಿ ಬಪ್ಪ ಮೋರಿಯಾ ಗಣಪತಿ ಬಪ್ಪ ಮೌರ್ಯ ಎಂಬ ಘೋಷವಾಕ್ಯವನ್ನು ಕೂಗುತ್ತಾ ವಿಸರ್ಜನೆ ಮಾಡಲಾಯಿತು ಎಂದರು.
ಇನ್ನೂ ಇದೆ ವೇಳೆ ಯುವ ಮುಖಂಡ ಎತ್ತಿನಹಟ್ಟಿ ದೇವರಾಜ್ ಮಾತನಾಡಿದರು. ಪ್ರತಿ ವರ್ಷ ಮಲ್ಲೂರಹಳ್ಳಿ ದೊಡ್ಡಮಲ್ಲಯ್ಯನ ಕಪಿಲೆ ಗ್ರಾಮಸ್ಥರು ಮತ್ತು ಯುವಕರು ಸಂಭ್ರಮ ಸಡಗರದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಾಮವ್ವ ರಾಮಾಂಜನೇಯ್ಯ, ಮಲ್ಲಿಕಾರ್ಜುನ್,ಗಿಡ್ಡಯ್ಯ, ಗಂಗಾಧರ ಲಂಬಾಣಿಹಟ್ಟಿ ನಾಗರಾಜ್ ರವಿ ಸೇರಿದಂತೆ ಮಲ್ಲೂರಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು