ಚಳ್ಳಕೆರೆ :
ಮಾನವ ಸರಪಳಿಯಲ್ಲಿ ಭಾಗವಹಿಸಿ ಇತಿಹಾಸ
ಸೃಷ್ಠಿಸೋಣ
ರಾಜ್ಯದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಸೆ. 15 ರಂದು
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲು ಸರ್ಕಾರ
ಸಿದ್ಧತೆ ನಡೆಸಿದೆ.
ಚಿತ್ರದುರ್ಗ ಜಿಲ್ಲೆಯ ಗಡಿ ಭಾಗ ಮೊಳಕಾಲ್ಕೂರಿನ
ಮೇಲಿನಕಣಿವೆಯಿಂದ ಜೆ ಜಿ ಹಳ್ಳಿವರೆಗೆ ಸುಮಾರು 140 ಕಿ. ಮೀ.
ಉದ್ದ ಮಾನವ ಸರಪಳಿ ರಚಿಸಲಾಗುತ್ತಿದೆ ಎಂದು ಡಿಸಿ ವೆಂಕಟೇಶ್
ಹೇಳಿದರು.
ಅವರು ಮೊಳಕಾಲ್ಕೂರಿನ ಸಭೆಯಲ್ಲಿ ಮಾತಾಡಿದರು.
ಎಸ್ಸಿ ಎಸ್ಟಿ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಸಂಘಗಳ ಸಂಸ್ಥೆಗಳ
ಪದಾಧಿಕಾರಿಗಳು, ವಿವಿಧ ಸಂಘಟನೆಗಳು ಭಾಗವಹಿಸಲು
ತಿಳಿಸಿದರು.