ಚಳ್ಳಕೆರೆ ::
ಸಂಪೂರ್ಣ ಗುಣಮುಖರಾಗಿ ಮನೆಗಳಿಗೆ ತೆರಳಿದ
ಜನರು
ಹೊಸದುರ್ಗದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ, ಸುಮಾರು 50
ಜನರು ಉಸಿರಾಟದ ತೊಂದರೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ
ದಾಖಲಾಗಿದ್ದರು.
ಅವರಲ್ಲಿ 45 ಜನರು ಚಿಕಿತ್ಸೆ ಪಡೆದು ಅಂದೆ
ಮನೆಗಳಿಗೆ ತೆರಳಿದ್ದರು. ಉಳಿದ ಐವರು ಚಿಕಿತ್ಸೆ ಪಡೆಯುತ್ತಿದ್ದರು.
ಇದೀಗ ಅವರೂ ಕೂಡ ಸಂಪೂರ್ಣ ಗುಣಮುಖರಾಗಿ
ಮನೆಗಳಿಗೆ ತೆರಳಿದ್ದಾರೆಂದು ಹೊಸದುರ್ಗ ತಾಲೂಕು ಆಸ್ಪತ್ರೆಯ
ಆರೋಗ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಎರಡು ದಿನಗಳ
ಹಿಂದೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿದ ಕ್ಲೋರಿನ್
ಸೋರಿಕೆಯಾಗಿತ್ತು.