ನಾಯಕನಹಟ್ಟಿ ಬೆಸ್ಕಾಂ ಇಲಾಖೆ ಸಿಬ್ಬಂದಿಗಳಿಗೆ ಶ್ರೀ ಶಕ್ತಿ ಗಣಪತಿಯು ಯಾವುದೇ ವಿಘ್ನಗಳು ಬಾರದಂತೆ ಕಾಪಾಡಲಿ ಬೆಸ್ಕಾಂ ಶಾಖಾಧಿಕಾರಿ ಎನ್ ಬಿ ಬೋರಣ್ಣ,
ನಾಯಕನಹಟ್ಟಿ:: ಸೆ. 7.
ಪ್ರತಿ ವರ್ಷದಂತೆ ಬೆಸ್ಕಾಂ ಇಲಾಖೆಯ ಕಚೇರಿಯಲ್ಲಿ ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯವು ನೆರವೇರಿಸಲಾಗುತ್ತದೆ ಎಂದು ಶಾಖಾಧಿಕಾರಿ ಎನ್ .ಬಿ. ಬೋರಣ್ಣ ಹೇಳಿದ್ದಾರೆ.
ಶನಿವಾರ ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾಪನೆ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಬೆಸ್ಕಾಂ ಇಲಾಖೆ ಸಿಬ್ಬಂದಿಗಳು ಪ್ರತಿ ವರ್ಷ ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾಪಿಸಿ ಮತ್ತು ಪೂಜಾ ಕಾರ್ಯ ನೆರವೇರಿಸಲಾಗುತ್ತದೆ ಇಂದು ಶನಿವಾರ ಬೆಳಗ್ಗೆ ಕಚೇರಿಯಲ್ಲಿ ಶ್ರೀ ಶಕ್ತಿ ಗಣಪತಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯ ನೆರವೇರಿಸಲಾಗಿದೆ.
ಇನ್ನೂ ಮಧ್ಯಾಹ್ನ ಸಿಬ್ಬಂದಿಗಳಿಗೆ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಇನ್ನೂಸಂಜೆ 5 ಗಂಟೆಗೆ ತೆರೆದ ವಾಹನದಲ್ಲಿ ಶ್ರೀ ಶಕ್ತಿ ಗಣಪತಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಸಮೀಪದ ಹಿರೇಕೆರೆಯಲ್ಲಿ ಶ್ರೀ ಶಕ್ತಿ ಗಣಪತಿಯನ್ನ ವಿಸರ್ಜನೆ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಜಿ. ಗೋವಿಂದಪ್ಪ ಮಾತನಾಡಿದರು ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಇಲಾಖೆಯ ಸಿಬ್ಬಂದಿಗಳಾದ ಸಂಗಪ್ಪ ಮತ್ತು ಮಹಾಂತೇಶ್ ಜಮಲದಿನ್ನಿ, ಅನ್ನಸಂತರ್ಪಣೆ ನೆರವೇರಿಸಿದ್ದಾರೆ ಶ್ರೀ ಶಕ್ತಿ ಗಣಪತಿ ಅವರಿಗೆ ಆಯುರ್ ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಬೆಸ್ಕಾಂ ಇಲಾಖೆ ಸಿಬ್ಬಂದಿಗಳಾದ
ನಲಗೇತನಹಟ್ಟಿ ಬಿ ಪಿ ಪಾಲಯ್ಯ, ಆರ್ .ಟಿ. ರುದ್ರಮುನಿ, ಎಸ್ ಓ. ಶಿವರಾಜ್, ಟಿ ಆರ್. ದಿನೇಶ್, ಸೆಮಿವುಲ್ಲಾ, ಸುಲ್ತಾನ್, ಸೈಯದ್ ಇಮ್ರಾನ್, ಡಿ ಎಂ ಅಭಿಷೇಕ್, ಸೈಯದ್ ಇರ್ಫಾನ್, ಅಜಯ್ ಕುಮಾರ್, ತಿಪ್ಪೇಸ್ವಾಮಿ, ಪ್ರದೀಪ್ ,ಜಾಕಿರ್ ಹುಸೇನ್, ವೀರೇಶ್ ಕುಮಾರ್, ಚಂದ್ರಪ್ಪ, ಗುತ್ತಿಗೆದಾರರಾದ ಓಂ ಪ್ರಕಾಶ್, ದಾದಾಪೀರ್, ಪೊಲೀಸ್ ಪೇದೆಗಳಾದ ಶ್ರೀಹರಿ, ರಾಮಾಂಜನಿ ಇದ್ದರು.