ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಕುವೆಂಪು ಪರಿಕಲ್ಪನೆಯ
ಸಿ.ಮಹೇಶ ಹಾಗೂ ಟಿ.ಪದ್ಮಾವತಿ ಮಂತ್ರ ಮಾಂಗಲ್ಯ ಮದುವೆ.

ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು. ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳು, ಅರ್ಥವಿಲ್ಲದ ಆಚರಣೆಗಳು, ಮತ್ತು ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.

ಸರಳ ವಿವಾಹ ಪದ್ಧತಿಯ ಮೂಲಕ ಸಾಮಾಜಿಕ ಬದಲಾವಣೆ ತರಲು ಹೇಗೆ ಸಾಧ್ಯ ಎಂಬುದನ್ನು ಕುವೆಂಪುರವರ ಕೆಳಗಿನ ಈ ಒಂದು ಮಾತಿನಿಂದಲೇ ಅರ್ಥೈಸಿಕೊಳ್ಳಬಹುದು

ಇಂತಹ ಕುವೆಂಪು ಪರಿಕಲ್ಪನೆ ಮಧುವೆ .

ನಾಯಕನಹಟ್ಟಿ:: ಸೆ.9 .
ಹೋಬಳಿಯ ಎನ್.ಗೌರಿಪುರದ ಉಮಾಮಹೇಶ್ವರ ದೇವಸ್ಥಾನದದಲ್ಲಿ ನಡೆದ ತಾಲ್ಲೂಕಿನ ನಗರಂಗೆರೆ ಗ್ರಾಮದ ಸಿ.ಮಹೇಶ ಹಾಗೂ ಕರಿಕೆರೆ ಗ್ರಾಮದ ಟಿ.ಪದ್ಮಾವತಿ ಇವರ ಮಂತ್ರಮಾಗ್ಯಕ್ಕೆ ಸಾಕ್ಷಿಯಾಗಿದೆ.

ಬೇರೆ ಬೇರೆ ಜಾತಿಯವರಾದ ಸಿ.ಮಹೇಶ,ಹಾಗೂ ಟಿ.ಪದ್ಮಾವತಿ ಪರಿಸ್ಪರ ಪ್ರೀತಿಸಿ ಎರೆಡು ಕಡೆ ಕುಟುಂಗಳ ಒಪ್ಪಿಗೆ ಪಡೆದು ನಿವೃತ್ತಿ ಪ್ರಾಂಶುಪಾಲರಾದ ಶಿವಲಿಂಗಪ್ಪ,ಪ್ರೊ.ರಾಜಣ್ಣ,ಕೆ.ಚಿತ್ತಯ್ಯ ಹಾಗೂ ಉಪನ್ಯಾಸಕ ಧನುಂಜಯ ಇವರು ಕುವೆಂಪು ರಚಿತ ಮಂತ್ರಗಳನ್ನು ಹೇಳುವುದರ ಮೂಲಕ ನವ ವಧು ವರರು ಹಾರೈಸಿದರು.ವಧು ವರ ಪರಸ್ಪರ ಹೂ ಮಾಲೆ ಹಾಕಿ ಹಿರಿಯರಿಂದ ಆಶೀರ್ವಾದ ಪಡೆದು ವಧುವಿಗೆ ವರ ಮಾಂಗಲ್ಯ ಧಾರಣೆ ಮಾಡಿ ಮೂಲಕ ವಿವಾಹ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹಿರಿಯರು ಬಂದು ಬಳಗ ಸ್ನೇಹಿತರು ರೈತ ಮುಖಂಡರು ಈ ಮದುವೆಗೆ ಸಾಕ್ಷಿಯಾದರು.

Namma Challakere Local News
error: Content is protected !!