ತೊರೆ ಕೋಲಮನಹಳ್ಳಿಯಲ್ಲಿ ಸಂಭ್ರಮ ಸಡಗರದಿಂದ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಜಾನಪದ ಕಲಾತಂಡಗಳೊಂದಿಗೆ ವಿಸರ್ಜನೆ ಮಾಡಲಾಯಿತು ಕೆ. ಆರ್ ಮನೋಹರ್,

ನಾಯಕನಹಟ್ಟಿ:: ಹಿಂದೂಗಳ ಪ್ರಮುಖವಾದ ಹಬ್ಬಗಳಲ್ಲಿ ಗಣೇಶ ಚತುರ್ಥಿ ತುಂಬಾನೇ ಖ್ಯಾತಿ ಪಡೆದುಕೊಂಡಿದೆ ಎಂದು ತೊರೆಕೋಲಮ್ಮನಹಳ್ಳಿ
ಕೆ. ಆರ್ .ಮನೋಹರ್ ಹೇಳಿದ್ದಾರೆ.

ಅವರು ಸೋಮವಾರ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೊರೆಕೂಲಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಎರಡನೇ ವರ್ಷದ ಶ್ರೀಗಣಪತಿ ವಿಸರ್ಜನೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ.
ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಮೂರು ದಿನ ಧಾರ್ಮಿಕ ಕೈಕಾರ್ಯಗಳನ್ನು ಹಾಗೂ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿ. ಇಂದು ಸೋಮವಾರ ಹೂವಿನ ಅಲಂಕಾರವಾದ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಪ್ರದರ್ಶನದೊಂದಿಗೆ ಮೆರವಣಿಗೆ ಮಾಡಿ ಊರಿನ ಪಕ್ಕದಲ್ಲಿರುವ ಚಿನ್ನ ಗರಿ ಹಳ್ಳಕ್ಕೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು ಎಂದರು.

ಇದೇ ಸಂದರ್ಭದಲ್ಲಿ ತೊರೆಕೊಲಮ್ಮನಹಳ್ಳಿ ವಿನಾಯಕ ಗೆಳೆಯರ ಬಳಗದ ಎಂ ಟಿ ಮನೋಜ್, ನಂದಕುಮಾರ್, ಅಭಿಷೇಕ್, ಮಹೇಶ್, ಚೇತನ್ ಕುಮಾರ್, ಮೋಹನ್ ಕುಮಾರ್, ಸೇರಿದಂತೆ ಸಮಸ್ತ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು

Namma Challakere Local News
error: Content is protected !!