ಚಳ್ಳಕೆರೆ :
ಹೊರ ರಾಜ್ಯದಿಂದ ಗುಳೆ ಬಂದ ದಂಪತಿಗಳಿಬ್ಬರ ಮಧ್ಯೆ ಬಿರುಕು ಉಂಟಾಗಿ ಸಾವಿನಲ್ಲಿ ಅಂತ್ಯಕಂಡಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ತಳಕು ಪೋಲಿಸ್ ಠಾಣೆ ವ್ಯಾಪ್ತಿಯ
ಕಾಲುವೆಹಳ್ಳಿ ಗ್ರಾಮದ ಹೊರವಲಯದಲ್ಲಿ ಮಹಾರಾಷ್ಟ್ರ ಮೂಲದ ಕುಟುಂಬವೊಂದು
ಇದ್ದಿಲು ಸುಡುವ ವಲಸೆ ಕಾರ್ಮಿಕರು ಟೆಂಟ್ ಹಾಕಿಕೊಂಡು ಇದ್ದಿಲು
ಸುಡುವ ಕಾಯಕದಲ್ಲಿ ತೊಡಗಿರುತ್ತಾರೆ.
ಪ್ರತಿ ಭಾನುವಾರ ಕೂಲಿ ಹಣ ಬಟವಾಡೆಯಾಗಿದ್ದು ಅಗತ್ಯ
ಸಾಮಾಗ್ರಿಗಳನ್ನು ಖರಿಸಿ ಎಣ್ಣೆ ಬಾಡೂಟ ಮಾಡಿ ಸವಿಯುವಾಗ
ಭಾನುವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಗಂಡ ಹೆಂಡತಿ ನಡುವೆ
ಕ್ಷುಲ್ಲಕ ಗಲಾಟೆಯೂ ನಡೆದಿದೆ,
ಈ ಗಲಾಟೆ ಮಾರಣಾಂತಿಕ
ಹಲ್ಲೆಯಾಗಿ ಗಂಡ ಹರಿಶ್ಚಂದ್ರ ಪ್ಪ(65) ಚಿಕಿತ್ಸೆ ಫಲಿಸದೇ ಮೃತಪಟ್ಟರೆ
ಹೆಂಡತಿ ಯಶೋದ(55) ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯಿತ್ತಿದ್ದಾಳೆ ಘಟನ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು , ಡಿವೈಎಸ್ಪಿ ಬಿಟಿ.ರಾಜಣ್ಣ, ತಳಕು ವೃತ್ತ
ನಿರೀಕ್ಷಕ ಹನುಮಂತಪ್ಪ , ಭೇಟಿ ನೀಡಿ ಪರಿಶೀಲನೆ ನಡೆಸಿ ತಳಕು
ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.