ಚಳ್ಳಕೆರೆ :
ದರ್ಶನ್‌ರನ್ನ ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು- ಶಿಗ್ಲಿ
ಬಸ್ಯಾ ಸ್ಫೋಟಕ ಹೇಳಿಕೆ
ನಟ ದರ್ಶನ್ ಅವರನ್ನ ತಿಹಾರ್ ಜೈಲಿಗೆ ಶಿಫ್ಟ್ ಮಾಡಬೇಕು, ಬಳ್ಳಾರಿ
ಜೈಲ್ ಸೇಫ್ ಇಲ್ಲ ಎಂದು, ನಟೋರಿಯಸ್ ಕಳ್ಳ ಶಿಗ್ಲಿ ಬಸ್ಯಾ
ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜೈಲ್‌ನಲ್ಲಿ ನಟ ದರ್ಶನ್‌ಗೆ
ನೂರಾರು ಅಭಿಮಾನಿಗಳು ಇದ್ದಾರೆ. ಅಲ್ಲೂ ಎಲ್ಲಾ ಸವಲತ್ತು
ಸಿಗುತ್ತೆ, ಬಳ್ಳಾರಿ ಜೈಲಿನಿಂದ ಗ್ರೇಟ್ ಎಸ್ಕೆಪ್ ಆದವರು ಇದ್ದಾರೆ.
ಬಳ್ಳಾರಿ ಜೈಲು ದರ್ಶನ್ ಗೆ ಸೇಪ್ ಅಲ್ಲ, ಅಪರಾಧಗಳ ಮೇಲೆ
ಅಪರಾಧ ಆಗ್ತಾವೆ ಹೀಗಾಗಿ ತಿಹಾರ್ ಜೈಲಿಗೆ ಶಿಫ್ಟ್ ಮಾಡಿ ದರ್ಶನ್
ಮನ ಪರಿವರ್ತನೆ ಆಗಲಿ ಎಂದು ಲಕ್ಷೇಶ್ವರದಲ್ಲಿ ಮಾಧ್ಯಮಗಳಿಗೆ
ಹೇಳಿಕೆ ನೀಡಿದ್ದಾರೆ.