ಚಳ್ಳಕೆರೆ : ಬೆಸ್ಕಾಂ ನಿರ್ಲಕ್ಷಕ್ಕೆ ಕುಡಿಯುವ ನೀರಿಗಾಗಿ ಮಹಿಳೆಯರ ಪರದಾಟ

ಹೌದು ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋಗನಹಳ್ಳಿ ಗ್ರಾಮದ ಮಹಿಳೆಯರ ಅಳಲಾಗಿದೆ.

ಗ್ರಾಮ ಪಂಚಾಯತಿ ವತಿಯಿಂದ ಸುಮಾರು ನಾಲ್ಕು ಕೊಳವೆ ಬೋರ್ ವೆಲ್ ಗಳನ್ನು ಕುಡಿಯುವ ನೀರಿಗಾಗಿ ಕೊರೆಸಲಾಗಿದ್ದು,, ಆದರೆ ಅದಕ್ಕೆ ವಿದ್ಯುತ್ ಸಂಪರ್ಕ‌ ನೀಡಬೇಕಾದ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಕೊಳೆವೆ ಬಾವಿಯಿಂದ ನೀರು ಮೇಲಕ್ಕೆ ಬಾರದೆ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ‌.

ಇನ್ನು ಎರಡು ಕೊಳವೆ ಬೋರ್ವೆಲ್ ಗಳು ನೀರಿನಲ್ಲಿ ಜಲಾವೃತ ಹಾಗಿರುವುದರಿಂದ ಸಂಪೂರ್ಣವಾಗಿ ಮುಳಗಿ ಹೋಗಿವೆ.

ಇನ್ನು ಒಂದು ಬೋರ್ವೆಲ್ ಗೆ ವಿದ್ಯುತ್ ಸಂಪರ್ಕದ ಪರಿವರ್ತಕ ಪದೇ ಪದೇ ಸುಟ್ಟುಹೊಗುವುದರಿಂದ ಸಮಸ್ಯೆ ಉದ್ಬವವಾಗಿದೆ.

ಕೇವಲ 25 ಕೆವಿ ವಿದ್ಯುತ್ ಪರಿವರ್ತಕ ಅಳವಡಿಸಿ ಅದರಲ್ಲಿ ಗ್ರಾಮ ವಸತಿ ಮನೆಗಳಿಗೆ ಹಾಗೂ ಕುಡಿಯುವ ನೀರಿನ ಬೋರ್ ವೆಲ್ ಗಳಿಗೆ ನೀಡುವುದರಿಂದ ತಕ್ಷಣವೇ ಸುಟ್ಟು ಹೋಗುತ್ತಾರೆ ಆದ್ದರಿಂದ ಕೂಡಲೇ ಸುಮಾರು 60 ಕೆವಿ ಪರಿವರ್ತಕ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಗ್ರಾಮದ ಆಂಜನೇಯ ಮನವಿ ಮಾಡಿದ್ದಾರೆ.

ಇನ್ನೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೇದವಾಸಲು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರು,, ಕುಡಿಯುವ ನೀರಿಗಾಗಿ ಕೊಳವೆ ಬೋರವೆಲ್ ಗಳನ್ನು ಕೊರಿಸಲಾಗಿದೆ, ಆದರೆ ವಿದ್ಯುತ್ ಪರಿವರ್ತಕಗಳು ಪದೇ ಪದೇ ಸುಟ್ಟು ಹೋಗುವುದರಿಂದ ಕೊಂಚ ನೀರಿನ ಸಮಸ್ಯೆ ಉದ್ಭವವಾಗಿದೆ, ಆದ್ದರಿಂದ ಈ ಕೂಡಲೇ ಬೆಸ್ಕಾಂ ಇಲಾಖೆಗೆ ಸೂಚಿಸಲಾಗಿದೆ, ಹೊಸ ‌ವಿದ್ಯುತ್ ಪರಿವರ್ತಕ ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ, ಶೀಘ್ರವೇ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರು ಕೊಡಲಾಗುವುದು ಎಂದಿದ್ದಾರೆ.

About The Author

Namma Challakere Local News
error: Content is protected !!