ನಗರಸಭೆ ನೂತನ ಅಧ್ಯಕ್ಷರಾಗಿ ಜೈ ತುಂಬಿ ಆಯ್ಕೆ.
ಕಾಂಗ್ರೆಸ್‌ಪಕ್ಷ ಅಧಿಕಾರದ ಚುಕ್ಕಾಣಿಗೆ ಶಾಸಕ ಟಿ.ರಘುಮೂರ್ತಿಯ ಶ್ರಮ

ರಾಮಾಂಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ಬಾರೀ ಕುತುಹಲ ಮೂಡಿಸಿದ್ದ ಚಳ್ಳಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಇಂದು ತೆರೆಕಂಡಿದು. ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮೂರು ಪಕ್ಷದ ಸದಸ್ಯರು ಕಸರತ್ತು ನಡೆಸಿದರು, ಕೂಡ ಕಾಂಗ್ರೆಸ್ ಪಕ್ಷದ ಮತದಾರ ಸದಸ್ಯರು ಹೆಚ್ಚಿನದಾಗಿ ಇರುವುದರಿಂದ ಈ ಬಾರಿಯೂ ಕೂಡ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೇಸ್ ಪಕ್ಷದ ಕೈ ವಶವಾಗಿದೆ, ಅಧ್ಯಕ್ಷರಾಗಿ ಜೈತುಂಬಿ ಆಯ್ಕೆಯಾದರೆ, ಅವಿರೋಧ ಆಯ್ಕೆಯ ಉಪಾಧ್ಯಕ್ಷೆಯಾಗಿ ಓ.ಸುಜಾತಾ ಆಯ್ಕೆಯಾಗಿದ್ದಾರೆ.
ಇನ್ನೂ ಸ್ಥಳಿಯ ಶಾಸಕ ಟಿ.ರಘುಮೂರ್ತಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಈಡೀ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾದ ಪ್ರತಿನಿಧಿಗಳು ವಿವಿಧ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.
ಅದರಂತೆ ಕೂಡ ನಗರಸಭೆಯಲ್ಲಿ ತಮ್ಮದೇ ಆದ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಹಾಗೂ ಸರಕಾರದ ಜಾತಿವಾರು ಅಧಿನಿಯಮದಂತೆ ಕಾಂಗ್ರೇಸ್ ಪಕ್ಷ ಸದಸ್ಯರು ಸಜ್ಜುಗೊಂಡಿದ್ದರು, ಆದರೆ ಮೊದಲಿಗೆ ಈ ಬಾರಿಯ ಅಧ್ಯಕ್ಷ ಸ್ಥಾನ ಬಿಸಿಎಂ ಬಿಗೆ ಮೊದಲು ನಿಗಧಿಯಾಗಿತ್ತು, ಅದರಂತೆ ಚಳ್ಳಕೆರೆ ನಗರಸಭೆಯಲ್ಲಿ ಏಕೈಕ ಮಹಿಳೆ ನಗರಸಭೆ ಸದಸ್ಯೆ ಸಾವಿತ್ರಮ್ಮ ಇರುವ ಕಾರಣ ಅವರಿಗೆ ಬಹತೇಕ ಖಚಿತ ಎಂದು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಹಬ್ಬಿತ್ತು, ಆದರೆ ಸರಕಾರದ ನಿಯಮವಳಿಗಳ ಪ್ರಕಾರ ಜಿಎಸ್‌ಟಿ ಹಾಗೂ ತೆರೆಗೆ ಪವಾತಿದಾರರು ಹಾಗೂ ಇತರೆ ಕಾರಣಂತರಗಳಿAದ ಸಾವಿತ್ರಮ್ಮಗೆ ಅಧ್ಯಕ್ಷ ಸ್ಥಾನ ಕೈತಪ್ಪಿತು. ಇದರ ಬೆನ್ನಲೆ ಇನ್ನೂ ಬಿಸಿಎಂ.ಎ ಗೆ ನಗರಸಭೆ ಸದಸ್ಯರಲ್ಲಿ ಮೂರು ಸದಸ್ಯರು ಇದ್ದು ಅದರಲ್ಲಿ ಕಾಂಗ್ರೇಸ್ ಪಕ್ಷದ ಮಂಜುಳಾ ಪ್ರಸನ್ನ ಕುಮಾರ್, ಜೈತುಂಬಿ ಹಾಗೂ ಬಿಜೆಪಿ ಸಾಕಮ್ಮ ಇದ್ದರು ಆದರೆ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಬಿನ್ನಭಿಪ್ರಾಯ ತೋರದೆ ಜೈತುಂಬಿಗೆ ಸಹ ಮತ ತೋರಿ ಮಂಜುಳಾ ರವರು ಕಣದಿಂದ ಹಿಂದೆ ಸರಿದಿದ್ದರು, ಆದರೆ ಬಿಜೆಪಿಯಿಂದ ಸಾಕಮ್ಮ ಕಣಕ್ಕೆ ಹಿಳಿದಿದ್ದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸಾಕಮ್ಮ ಇವರ ಆಯ್ಕೆಯ ಪರವಾಗಿ 11 ಸದಸ್ಯರು ಮತ್ತು ಇವರ ಆಯ್ಕೆಯನ್ನು ವಿರೋಧವಾಗಿ 18 ಸದಸ್ಯರು ಕೈಎತ್ತುವ ಮೂಲಕ ಮತ ಚಲಾಯಿಸಿರುತ್ತಾರೆ. ಕಾಂಗ್ರೇಸ್ ಪಕ್ಷದ ಜೈತುಂಬಿ ಇವರ ಆಯ್ಕೆಯ ಪರವಾಗಿ 18 ಸದಸ್ಯರು ಮತ್ತು ಇವರ ಆಯ್ಕೆಯನ್ನು ವಿರೋಧವಾಗಿ 11 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿರುತ್ತಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಜೈತುಂಬಿ ಇವರ ಆಯ್ಕೆಯನ್ನು ಪರವಾಗಿ 18 ಸದಸ್ಯರು ಅತಿ ಹೆಚ್ಚು ಸಿಂಧು ಮತಗಳನ್ನು ಚಲಾಯಿಸಿರುವುದರಿಂದ ಇವರು ಚಳ್ಳಕೆರೆ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣೆ ಅಧಿಕಾರಿಗಳಾದ ಜಿಲ್ಲಾ ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಘೋಷಿಸಿದರು.
ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿ ಓ.ಸುಜಾತ ಇವರು ಒಬ್ಬರೆ ಕಣದಲ್ಲಿ ಇರುವುದರಿಂದ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.
ಆಯಿಲ್ ಸಿಟಿಯಲ್ಲಿ ಅಧಿಕಾರದ ಗದ್ದುಗೆ ಏರುವುದು ಒಂದು ಅಗ್ನಿ ಪರೀಕ್ಷೆಯೇ ಹೌದು.. ಕಳೆದ ಹದಿನೈದು ತಿಂಗಳ ಕಾಲ ಅಧಿಕಾರ ಇಲ್ಲದೆ ಜಿಲ್ಲಾಧಿಕಾರಿಗಳ ಆಡಳಿತ ಅವಧಿಯಲ್ಲಿ ಇದ್ದ ಸದಸ್ಯರು ಈಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ತುಂಬಿರುವುದರಿAದ ಕೊಂಚ ನೀರಾಳವಾಗಿದ್ದಾರೆ.


ಬಹುಮತ ಕಾಂಗ್ರೆಸ್ :
ನಗರಸಭೆಯ ಒಟ್ಟು 31 ಸದಸ್ಯರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದ ಕೆ.ಸಿ.ನಾಗರಾಜ್ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದು ಒಟ್ಟು 30 ಸದಸ್ಯರಲ್ಲಿ ಕಾಂಗ್ರೆಸ್ 16. ಬಿಜೆಪಿ 4, ಜೆಡಿಎಸ್ 9, ಇತರೆ 1, ಒಟ್ಟು 30 ಸದಸ್ಯರಿದ್ದಾರೆ. ಕಾಂಗ್ರೆಸ್ 16, ಜೆಡಿಎಸ್ 9, ಬಿಜೆಪಿ 4, ಪಕ್ಷೇತರ 1 ಸದಸ್ಯರಿದ್ದು, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿ 18 ಸದಸ್ಯರು ಹಾಗೂ ಶಾಸಕ ಟಿ.ರಘುಮೂರ್ತಿ ಸೇರಿ 19 ಮತಗಳಾಗುವುದರಿಂದ ಕಾಂಗ್ರೆಸ್ ಬಹಮತ ಪಡೆಯಲು ಸುಲಭವಾಗಿದ್ದು ಅಧ್ಯಕ್ಷ ಗಿರಿ ತಮ್ಮದಾಗಿಸಿಕೊಂಡಿದೆ. ಇದರಿಂದ ಕಾಂಗ್ರೆಸ್ ಪಕ್ಷ ನಗರಸಭೆ ಗದ್ದುಗೆ ಹೇರಿದ್ದು ಇನ್ನೂ 14 ತಿಂಗಳ ಕಾಲ ಅಧ್ಯಕ್ಷರ ಅಧಿಕಾರಕ್ಕೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಆರ್ಶೀವಾದಿಂದ ನಗರಸಭೆ ಅಧ್ಯಕ್ಷೆಯಾಗಿ ಜೈತುಂಬಿ ಅಧಿಕಾರ ವಹಿಸಿಕೊಂಡರು.
ಉಪಾಧ್ಯಕ್ಷ ಸ್ಥಾನಕ್ಕೆ ನಾಲ್ವರಲ್ಲಿ ಒಬ್ಬರು ಅವಿರೋಧ:
ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಮೀಸಲಾಗಿತ್ತು ಆದರೆ ಕಾಂಗ್ರೇಸ್ ಪಕ್ಷದಲ್ಲೆ ಸುಮಾರು ನಾಲ್ವರು ಎಸ್‌ಟಿ ಮೀಸಲಾತಿಯಲ್ಲಿ ಇದ್ದರು, ಆದರೆ ಎಲ್ಲಾ ಸಹಕಾರ ಪಡೆದ ಓ.ಸುಜಾತ ರವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.


ಕಾಂಗ್ರೇಸ್ ಒಕ್ಕೂಟ ಮನೆಯಂತೆ :
ಕಾಂಗ್ರೇಸ್ ಪಕ್ಷ ಮೊದಲಿನಿಂದಲೂ ಅಧಿಕಾರದ ಗದ್ದುಗೆ ಹಿಡಿದಿದೆ, ಅದರಂತೆ ಈ ಬಾರಿಯೂ ಕೂಡ ಯಾವುದೇ ಆತಂಕವಿಲ್ಲದೆ ಕಾಂಗ್ರೇಸ್ ಪಕ್ಷದಿಂದ ಬಿಸಿಎಂ ಬಿ ಯಿಂದ ಜೈತುಂಬಿಯವರು ಅಧ್ಯಕ್ಷರು ಹಾಗಿದ್ದಾರೆ, ಎಸ್‌ಟಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದಿಂದ ಉಪಾಧ್ಯಕ್ಷರಾಗಿ ಓ.ಸುಜಾತಾ ರವರು ಅಧಿಕಾರ ವಹಿಸಿದ್ದಾರೆ, ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ನೇತೃತ್ವದಲ್ಲಿ ನಗರಸಭೆ ಸದಸ್ಯರಾದ ಹೊಯ್ಸಳ ಗೊಂವಿದ್, ಪ್ರಶಾಂತ್ ರವರ ಹಾಗೂ ಪಕ್ಷೇತರ ಸದಸ್ಯರಾದ ರುದ್ರನಾಯಕ ರವರ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದು ಒಟ್ಟು ಹದಿನೆಂಟು ಮತಗಳ ಮೂಲಕ ಅಧ್ಯಕ್ಷರಾಗಿದ್ದಾರೆ ಇನ್ನೂ ಹೆಚ್ಚಿನದಾಗಿ ಚಳ್ಳಕೆರೆ ನಗರ ಅಭಿವೃದ್ದಿ ಪಥದತ್ತ ಕೊಂಡುಯ್ಯುವಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಶ್ರಮಿಸುತ್ತಾರೆ.—
–ಟಿ.ರಘುಮೂರ್ತಿ ಶಾಸಕರು ಚಳ್ಳಕೆರೆ ವಿಧಾನಸಭಾ ಕ್ಷೇತ್ರ

ಹೇಳಿಕೆ 2.:
ನಗರಸಭೆಯ ಎಲ್ಲಾರ ಸಹಕಾರ ಪಡೆದು ಅಭಿವೃದ್ದಿ ಪಥದತ್ತ ನಗರಸಭೆಯನ್ನು ಕೊಂಡುಯ್ಯುಲಾಗುವುದು, ನನ್ನ ಗೆಲುವಿಗೆ ಶ್ರಮಿಸಿದ ಎಲ್ಲಾ ಸದಸ್ಯರು ಹಾಗು ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೆನೆ, ಸ್ವಚ್ಚ ನಗರದ ಕಲ್ಪನೆ ನನ್ನ ಮೊದಲ ಆಧ್ಯತೆ.— ಜೈತುಂಬಿ ನೂತನ ನಗರಸಭೆ ಅಧ್ಯಕ್ಷರು

Namma Challakere Local News
error: Content is protected !!