ಮಡಿಲು ಸಂಸ್ಥೆ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಬೇರೆಯವರ ಗೆಲುವನ್ನು ಆನಂದಿಸಿದರೆ ವ್ಯಕ್ತಿತ್ವಕ್ಕೆ ಗೌರವ ಸಿಕ್ಕಂತೆ: ಉಪನ್ಯಾಸಕ ನಿರಂಜನ್
ಹೊಳಲ್ಕೆರೆ: ಕ್ರೀಡೆಯಲ್ಲಿ ನಾವು ಇನ್ನೊಬ್ಬರ ಗೆಲುವು ಕಂಡು ಆನಂದಿಸಿದರೆ ನಮ್ಮ ವ್ಯಕ್ತಿತ್ವಕ್ಕೆ ಗೌರವ ಸಿಕ್ಕಂತೆ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಕರ್ನಾಟಕ ಪಬ್ಲಿಕ್ ಕಾಲೇಜು ಉಪನ್ಯಾಸಕ ನಿರಂಜನ್ ಹೇಳಿದರು.
ತಾಲೂಕಿನ ಕಾಶಿಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಮತ್ತು
ಮಡಿಲು ಗ್ರಾಮೀಣ ಮತ್ತು ನಾಗರಾಭಿವೃದ್ಧಿ ಸಂಸ್ಥೆ ವತಿಯಿಂದ ಭಾರತದ ಶ್ರೇಷ್ಠ ಹಾಕಿ ಆಟಗಾರರಾಗಿದ್ದ ಮೇಜರ್ ಧ್ಯಾನ್ ಚಂದ್ ರವರ ಸ್ಮರಣಾರ್ಥವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು, ಪ್ರತಿಯೊಬ್ಬರೂ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿಯಾಗುತ್ತದೆ ಕ್ರೀಡೆಯಲ್ಲಿ ನಾವು ಇನ್ನೊಬ್ಬರ ಗೆಲುವನ್ನು ಕಂಡು ಸಂಭ್ರಮಿಸಬೇಕು ಆನಂದಿಸಬೇಕು ಆಗ ಕ್ರೀಡಾ ಸ್ಪೂರ್ತಿ ಕ್ರೀಡಾ ಮನೋಭಾವ ಬೆಳೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಶೇಷವಾಗಿ ಗ್ರಾಮೀಣ ಮಕ್ಕಳಲ್ಲಿ ಸಾಕಷ್ಟು ದೈಹಿಕ ಪ್ರತಿಭೆಗಳು ಅಡಕವಾಗಿರುತ್ತೆ, ಆದರೆ ಸೂಕ್ತ ಪ್ರೋತ್ಸಾಹದ ಜೊತೆಗೆ ಮುಕ್ತವಾದ ವೇದಿಕೆ ಸಿಕ್ಕಿರುವುದಿಲ್ಲ, ಇದರಿಂದ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ರೀಡಾ ವೇದಿಕೆಯಲ್ಲಿ ನಿರ್ಭಾಯದಿಂದ ದೈಹಿಕ ಪ್ರತಿಭೆಯನ್ನು ವಿದ್ಯಾರ್ಥಿಗಳು ತೋರ್ಪಡಿಸಬೇಕು, ವಿದ್ಯಾರ್ಥಿಗಳ ಪ್ರದರ್ಶನವನ್ನು ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಿದೆ ಸಂಘ-ಸಂಸ್ಥೆಗಳು ಕೂಡ ಆಸಕ್ತಿ ವಹಿಸಬೇಕು ಎಂದರು.
ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ.ಹೆಚ್ ಮಾತನಾಡಿ ಜನರು ಕ್ರೀಡಾ ಚುಟವಟಿಕೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವರ್ಷ ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ.
ದೈಹಿಕ ಚುಟುವಟಿಕೆಯಲ್ಲಿ ಭಾಗವಹಿಸುವುದು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಂತೆ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಕ್ರೀಡೆಗಳಲ್ಲಿ ಭಾಗವಹಿಸುವುದು ಒಳ್ಳೆಯದು. ಹೃದಯರಕ್ತನಾಳದ ಫಿಟ್‌ನೆಸ್, ಮೂಳೆ ಆರೋಗ್ಯ, ಸ್ಥೂಲಕಾಯತೆ, ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕ್ರೀಡೆಯಿಂದ ಪಡೆಯಬಹುದಾಗಿದೆ ಎಂದರು.
ಕಾಲೇಜು ಆವರಣದಲ್ಲಿ ಬಾಲಕ ಬಾಲಕಿಯರಿಗೆ 200 ಮೀಟರ್ ಓಟದವನ್ನ ಆಯೋಜಿಸಲಾಗಿದ್ದು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ದಿವ್ಯ, ದ್ವಿತೀಯ ಸ್ಥಾನ, ರೇಣುಕಾ, ತೃತೀಯ ಸ್ಥಾನ ಅಮೂಲ್ಯ ಹಾಗೂ ಪುರುಷ ವಿಭಾಗದಲ್ಲಿ ಪ್ರಥಮ ಸ್ಥಾನ ಮನು, ಅಜ್ಜಯ್ಯ ದ್ವಿತೀಯ ಸ್ಥಾನ, ರಂಗಸ್ವಾಮಿ ತೃತೀಯ ಸ್ಥಾನಗಳನ್ನ ಪಡೆದುಕೊಂಡಿದ್ದಾರೆ. ಮಡಿಲ ಸಂಸ್ಥೆಯ ವತಿಯಿಂದ ವಿಜೇತರಾದ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಕಾಶಿಪುರ ಕಾಲೇಜು ಉಪನ್ಯಾಸಕ ಕುಮಾರ್, ಅತಿಥಿ ಉಪನ್ಯಾಸಕ ರಮೇಶ್, ಮಾಂತೇಶ, ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದಪ್ಪ, ಸದಸ್ಯರುಗಳಾದ ದ್ಯಾಮ್ ಕುಮಾರ್, ಪ್ರವೀಣ್, ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.