ಚಳ್ಳಕೆರೆ : :
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಮತ್ತು ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆ ವತಿಯಿಂದ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಚಿತ್ರದುರ್ಗ ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ , ಸೀಬಾರ ಗುತ್ತಿನಾಡು ಇವರ ಸಹಯೋಗದಲ್ಲಿ ” ಮಾರಿ ಕಣಿವೆ ಇತಿಹಾಸ ” ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಈ ಕಾರ್ಯಕ್ರಮದ ಉದ್ಘಾನೆಯನ್ನು ಚಿತ್ರದುರ್ಗದ ಖ್ಯಾತ ವಕೀಲರಾದ ಬಿ.ಕೆ ರಹಮತ್ ಉಲ್ಲಾ ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನೀಲಕಂಠ ದೇವರು ಮತ್ತು ವೇದಿಕೆ ಮೇಲಿರುವ ಎಲ್ಲ ಗಣ್ಯಾತಿಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ವಕೀಲ ಬಿ.ಕೆ.ರಹಮತ್ ಉಲ್ಲಾ ರವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಪೋಕ್ಸೋ ಕೇಸುಗಳು, ಯುವಕರ ಆತ್ಮಹತ್ಯೆ, ಕೊಲೆಗಳು, ಬಾಲ್ಯ ವಿವಾಹಗಳು, ಹೆಚ್ಚು ದಾಖಲಾಗುತ್ತಿವೆ ಇದಕ್ಕೆ ಮೂಲ ಕಾರಣ ಇಂದಿನ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಯುವಕರು ಮಾಡುವ ಬೈಕ್ ವೀಲಿಂಗ್, ಸುಳ್ಳು ಭರವಸೆ , ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಮುಂದಿನ ಅಮೂಲ್ಯ ಜೀವನ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ವಿಫಲ ರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಲೇಖಕರು ಹಾಗೂ ವಿಮರ್ಶಕರು ಆದ ಶ್ರೀಯುತ ಪ್ರೊ,ಎಂ.ಜಿ ರಂಗಸ್ವಾಮಿ ರವರು ” ಮಾರಿ ಕಣಿವೆ ಇತಿಹಾಸ ” ಎಂಬ ವಿಷಯದ ಕುರಿತು ಸುದೀರ್ಘ ವಿಶೇಷ ಉಪನ್ಯಾಸ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿತು.
ನಂತರ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಆದ ಶ್ರೀಯುತ ನೀಲಕಂಠ ದೇವರು ಮಾತನಾಡಿ ಇಂತಹ ಕಾರ್ಯಕ್ರಮಗಳು , ಕವಿ ಗೋಷ್ಠಿಗಳು ಶಾಲಾ ಪಠ್ಯದ ಜೊತೆಗೆ ಈ ರೀತಿಯ ಸಾಹಿತ್ಯದ ಗೋಷ್ಠಿಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿರುವ ಪ್ರತಿಭೆ, ಕಲೆ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿರುತ್ತದೆ ಅಲ್ಲದೆ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಮತ್ತು ಭವಿಷ್ಯಕ್ಕೆ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಿ.ಸಾ.ವೆ ಅಧ್ಯಕ್ಷರು ಆದ ಡಾ.ಎಸ್.ಏಚ್. ಶಫಿ ಉಲ್ಲಾ
ಸಂಸ್ಥಾಪಕ ಅಧ್ಯಕ್ಷರಾದ ದಯಾ ಪುತ್ತೂರ್ಕರ್, ಸಲಹೆಗಾರರು ಆದ ಕೊರ್ಲ ಕುಂಟೆ ತಿಪ್ಪೇಸ್ವಾಮಿ,
ಪ್ರಾಂಶುಪಾಲರಾದ ಏಚ್.ಆರ್ ಸುಧಾ, ಚಿತ್ರದುರ್ಗ ಜಿಲ್ಲೆಯ ಲೋಕಾಯುಕ್ತ ಇಲಾಖೆಯ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಬಿ.ಮಲ್ಲೇಶಪ್ಪ,
ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಟಿ.ಶಿವಮೂರ್ತಿ, ಸಾಹಿತಿಗಳಾದ ಎನ್.ಶಿವಾನಂದ್
ಬಂಡೆಮೆಗಳಹಳ್ಳಿ
ವಕೀಲರಾದ ಬಿ.ಕೆ.ಎಸ್ ಅಂಜುಮ್, ಕನಕ ಪ್ರೀತೇಶ್, ಕೆ.ಎಸ್ ತಿಪ್ಪಮ್ಮ ನಾಗರಾಜ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು, 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಹಿಸಿದ್ದರು ಈ ಸಂದರ್ಭದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಎಲ್ಲ ಪದಾಧಿಕಾರಿಗಳು ಹಾಗೂ ವಿಶ್ವ ಮಾನವ ಸಾಂಸ್ಕೃತಿಕ ವಿದ್ಯಾ ಸಂಸ್ಥೆಯ ಎಲ್ಲ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು, ಹರ್ಷಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು,
ಕನ್ನಡ ಉಪನ್ಯಾಸರಾದ ಎನ್.ತಿಪ್ಪೇಸ್ವಾಮಿ ರವರು ಸ್ವಾಗತಿಸಿದರು, ಆರ್.ಜೆ ವಿನಾಯಕ್ ನಿರೂಪಿಸಿದರು,
ಏಚ್. ಸತೀಶ್ ಕುಮಾರ್ ವಂದಿಸಿದರು.