ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ. ಗೆದ್ದುಬೀಗಿದ ಕಾಂಗ್ರೆಸ್ ಪಡೆ.

ನಾಯಕನಹಟ್ಟಿ:: ಆಗಸ್ಟ್ 28. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಯಕನಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಮಂಜುಳಾ ಶ್ರೀಕಾಂತ್. ಉಪಾಧ್ಯಕ್ಷೆ ಸರ್ವ ಮಂಗಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಶಿಷ್ಟ ಜಾತಿ ಮೀಸಲಾಗಿದ್ದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ಶ್ರೀಕಾಂತ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸರ್ವಮಂಗಳ ನಾಮಪತ್ರ ಸಲ್ಲಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿಗಳು ತಹಸಿಲ್ದಾರ್ ರೇಹಾನ್ ಪಾಷಾ ಅವಿರೋಧವಾಗಿ ಘೋಷಣೆಯನ್ನು ಮಾಡಿದ್ದಾರೆ.

16 ಸದಸ್ಯರ ಬಲ ಹೊಂದಿದಂತಹ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ 2. ಕಾಂಗ್ರೆಸ್ 13. ಪಕ್ಷೇತರ.1 ಒಂದನೇ ವಾರ್ಡಿನ ಸದಸ್ಯ ಸ್ಥಾನ ಕಾಲಿ ಉಳಿದಿದೆ….

ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಪಾಲಾಗಿದೆ…

ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ವಿಜಯೋತ್ಸವದಲ್ಲಿ ಭಾಗಿಯಾಗಿ.. ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೂ.. ಪಕ್ಷದ ಮುಖಂಡರಿಗೂ… ಹಾಗೂ ಚುನಾವಣೆಗೆ ಸಹಕರಿಸಿದ ಸರ್ವರಿಗೂ ಅಭಿನಂದನೆಯನ್ನು ಸಲ್ಲಿಸಿದರು…

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು… ಕಾಂಗ್ರೆಸ್ ಮುಖಂಡರು ಎಲ್ಲಾ ಜನಪ್ರತಿನಿಧಿಗಳು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಒಟ್ಟುಗೂಡಿ ಒಮ್ಮತದ ಮನಸ್ಸಿನಿಂದ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸರ್ಕಾರ ನಿಗದಿ ಪಡಿಸಿದಂತೆ ರೀತಿಯಲ್ಲಿ ಈ ದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಲ್ಲದೆ ಆ ವಿರೋಧ ಆಯ್ಕೆಗೆ ಅವಕಾಶ ಮಾಡಿಕೊಟ್ಟಂತ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.. ಅದೇ ರೀತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಹ ಸರ್ವ ಸದಸ್ಯರ ಜೊತೆಗೂಡಿ ಜನರ ಸಮಸ್ಯೆಗಳನ್ನು ಆಲಿಸಿ ಉತ್ತಮ ಆಡಳಿತವನ್ನು ನಡೆಸಿಕೊಂಡು ಇತರೆ ಸದಸ್ಯರಿಗೆ ಮಾದರಿಯಾಗುವಂತೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು….

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಾಲರಾಜ್, ಪ್ರಭುಸ್ವಾಮಿ, ನೇರಲಗುಂಟೆ ಸೂರನಾಯಕ,ಬಂಡೆ ಕಪಿಲೆ ಓಬಣ್ಣ, ಮಲ್ಲೂರಹಟ್ಟಿ ಗೌಡ್ರು ತಿಪ್ಪೇಸ್ವಾಮಿ,
ಪಟ್ಟಣ ಪಂಚಾಯತಿ ಸದಸ್ಯರಾದ ಕೆ.ಪಿ. ತಿಪ್ಪೇಸ್ವಾಮಿ ,ಓ. ಮಹೇಶ್ವರಿ, ಬಿ. ಗುರುಶಾಂತಮ್ಮ, ಶ್ರೀಮತಿ ಸುನಿತಾ ಮುದಿಯಪ್ಪ, ಈರಮ್ಮ, ಸೈಯದ್ ಅನ್ವರ್, ಜೆ ಆರ್ ರವಿಕುಮಾರ್, ಪಾಪಮ್ಮ, ತಿಪ್ಪೇಶ್, ಬಿ ವಿನುತಾ, ಎನ್ ಮಹಾಂತಣ್ಣ, ಪಿ. ಬೋಸಮ್ಮ, ಪಿ.ಓಬಯ್ಯದಾಸ್, ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಓ. ಶ್ರೀನಿವಾಸ್, ಹಾಗೂ ವಕೀಲ ಉಮಾಪತಿ, ಬೋಸೆದೇವರಹಟ್ಟಿ ಧನಂಜಯ,
ನಾಯಕನಹಟ್ಟಿ ಮತ್ತು ತಳಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ,
ಬಗರು ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರನಾಯಕ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ. ಬಸಪ್ಪ ನಾಯಕ, ಕುದಾಪುರ ಕೆ.ಜಿ. ಪ್ರಕಾಶ್, ಶ್ರೀನಿವಾಸ್,
ಜಿ. ಬಿ. ಮುದಿಯಪ್ಪ, ವರವು ಕಾಟಯ್ಯ, ಶಂಕರ್ ಮೂರ್ತಿ, ಎನ್ ದೇವರಹಳ್ಳಿ ಟಿ ರಾಜಣ್ಣ,ನಾಗರಾಜ್, ರೇಖಲಗೆರೆ ಎ.ಟಿ. ಅಶೋಕ್, ನಾಯಕನಹಟ್ಟಿ ಓಬಳೇಶ್, ಜೋಗಿಹಟ್ಟಿ ಎಚ್ ಬಿ. ತಿಪ್ಪೇಸ್ವಾಮಿ ,ಜಾಗನೂರಹಟ್ಟಿ ಪಿ. ಮುತ್ತಯ್ಯ, ಚನ್ನಬಸಯ್ಯನಹಟ್ಟಿ ಛೇರ್ಮನ್ ತಿಪ್ಪೇಸ್ವಾಮಿ , ನಾಯಕನಹಟ್ಟಿ ಕ.ರ.ವೇ ರಾಘವೇಂದ್ರ ,ತಿಪ್ಪೇಸ್ವಾಮಿ, ಮಲ್ಲೂರಹಟ್ಟಿ ನಾಗರಾಜ್, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್ ಪಿಎಸ್ಐ2 ಕೆ. ಶಿವಕುಮಾರ್, ಮತ್ತು ಸಿಬ್ಬಂದಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮುಖಂಡರು ಯುವಕರು ಮಹಿಳೆಯರು ಸೇರಿದಂತೆ ಸಮಸ್ತ ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು,

About The Author

Namma Challakere Local News
error: Content is protected !!