ಚಳ್ಳಕೆರೆ : ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿಯAತ ವೇದಿಕೆಗಳು ಸಹಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಘಟಪರ್ತಿ ಕ್ಲಸ್ಟರ್ ಮಟ್ಟದ 2024-25ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಗ್ದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಮಕ್ಕಳಲ್ಲಿ ಅಡಗಿರುವಂತಹ ವೈವಿಧ್ಯಮಯ ಪ್ರತಿಭೆಗಳು ಅನಾವರಣಗೊಳ್ಳಲು ಇಂತಹ ವೇದಿಕೆಗಳು ಸಹಕಾರಿಯಾಗಬಲ್ಲವು ಎಂದರು.
ಎಸ್‌ಡಿಎAಸಿ ಅಧ್ಯಕ್ಷ ಧನಂಜಯ ಮಾತನಾಡಿ, ಶಿಕ್ಷಕರು ಶಾಲೆಗಳಲ್ಲಿ ಪಾಠ ಬೋಧನೆ ಜೊತೆಗೆ ಮಕ್ಕಳಲ್ಲಿ ಇರುವಂತಹ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ತಾಲೂಕು ಜಿಲ್ಲೆ ರಾಜ್ಯ ಮಟ್ಟಕ್ಕೆ ಕೊಂಡೊಯ್ಯುವAತಹ ಪ್ರಾಮಾಣಿಕ ಕೆಲಸ ಮಾಡಬೇಕು ಆ ಮೂಲಕ ಮಕ್ಕಳು ಅವರಲ್ಲಿ ಅಡಗಿರುವಂತಹ ಸೃಜನಾತ್ಮಕತೆಯನ್ನು ಹೊರಹಾಕಲು ಸಹಾಯಕವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ವೆಂಕಟಸ್ವಾಮಿ ಮಾತನಾಡಿ, ಮಕ್ಕಳು ಕಲಿಕೆ ನಿರಂತರವಾದದ್ದು, ಆ ಕಲಿಕೆಯನ್ನು ವರ್ಷದಿಂದ ವರ್ಷಕ್ಕೆ ಇಂತಹ ಪ್ರತಿಭಾ ಕಾರಂಜಿಗಳ ಮೂಲಕ ಕೊಂಡುಯ್ಯುವ ಕೆಲಸ ಹಾಗಬೇಕು ಆಗ ಮಾತ್ರ ಮಕ್ಕಳ ಗುಣಮಟ್ಟದ ಕಲಿಕೆಗೆ ಸಾತ್ವಿಕ ಮೌಲ್ಯ ಸಿಗುತ್ತದೆ ಎಂದರು.
ಗ್ರಾಮ ಪಂಚಾಯಿತ್ ಸದಸ್ಯ ಜಿ.ಸೇವ್ಯಾನಾಯ್ಕ್ ಮಾತನಾಡಿ, ಗಡಿಗ್ರಾಮಗಲ್ಲಿ ಇಂತಹ ಕಾರ್ಯಕ್ರಮಗಳು ನಡೆದಾಗ ಮಾತ್ರ ಮ್ಕಕಳ ಭವಿಷ್ಯ ರೂಪಿಸಲು ಸಾಧ್ಯ. ವಿದ್ಯಾರ್ಥಿ ಜೀವನದ ಕನಸ ಮಾಡಲು ಈ ಹಂತದ ಚಟುವಟಿಕೆಗಳು ಪ್ರೇರಕ ಶಕ್ತಿಯಗುತ್ತಾವೆ ಆದ್ದರಿಂದ ಶಿಕ್ಷಕರು ಮಾರ್ಗದರ್ಶಕರಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸವ ಕೆಲಸವಾಗಬೇಕು ಎಂದರು
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತ್ ಸದಸ್ಯೆ ಅಶ್ವಿನಿ ರುದ್ರಪ್ಪ, ಉಮೇಶ್, ಟಿಪ್ಪು ಸುಲ್ತಾನ್, ಸಿಆರ್‌ಪಿ.ಮಾರಣ್ಣ, ವಸತಿ ಪ್ರೌಢಶಾಲೆಯ ಶಿಕ್ಷಕರಾದ ನಾಗರಾಜಪ್ಪ, ಮಂಜುನಾಯ್ಕ, ವೀರೇಶ್, ಬಸವರಾಜ, ಹನುಮಂತರೆಡ್ಡಿ, ಚೆನ್ನಮಲ್ಲಮ್ಮ, ರಾಮನಾಯ್ಕ, ಪ್ರತಿಭಾ, ವೆಂಕಟಸ್ವಾಮಿ, ಶ್ರೀ ಗೋಪಿನಾಥ, ಅನಿತ. ಎಂ. ಹಾಗೂ ಹಳೆಯ ವಿದ್ಯಾರ್ಥಿಗಳ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು…

Namma Challakere Local News
error: Content is protected !!