ಚಳ್ಳಕೆರೆ :

ಸೆಪ್ಟೆಂಬರ್ 3 ರಂದು ನಡೆಯಲಿರುವ ಮಧ್ಯ ಕರ್ನಾಟಕದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಅಂಗವಾಗಿ ಸ್ಥಳೀಯ ಶಾಸಕ ಎನ್ ವೈ ಗೋಪಾಲಕೃಷ್ಣ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ನೇತೃತ್ವದಲ್ಲಿ ಇಂದು ಜಾತ್ರೆಯ ಸಕಲ ಸಿದ್ಧತೆಗಳ ಬಗ್ಗೆ ಸ್ಥಳವೀಕ್ಷಣೆ ನಡೆಸಿದರು.

ಇನ್ನೂ ಮೊದಲಿಗೆ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರು ಶ್ರೀ ಗೌರಸಮುದ್ರ ಮಾರಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ನಂತರ ಜಾತ್ರೆ ನಡೆಯುವ ತುಮಲು ಪ್ರದೇಶಕ್ಕೆ ದಲ್ಲಿ ಪೂರ್ವ ಯೋಜಿತ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ಜಾತ್ರೆ ನಡೆಯುವ ಸ್ಥಳದಲ್ಲಿ ಕುಡಿಯುವ ನೀರಿಗಾಗಿ ಹಾಕಿಸಿದ ಕೊಳವೆ ಬೋರ್ವೆಲ್ ನೀರನ್ನು ವೀಕ್ಷಿಸಿದರು, ನಂತರ ಬೆಳಕಿನ ವ್ಯವಸ್ಥೆ ಹಾಗೂ ಸ್ವಚ್ಛತೆಯ ಬಗ್ಗೆ ಹಾಗೂ ಜನದಟ್ಟಣೆಯ ಬಗ್ಗೆ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ರಸ್ತೆ ಮಾರ್ಗದ ವಿವರಗಳ ಬಗ್ಗೆ ಸಂಪೂರ್ಣವಾಗಿ ಸ್ಥಳದಲ್ಲೇ ಮಾಹಿತಿ ಪಡೆದುಕೊಂಡರು.

ಇನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಓಬಣ್ಣ ನಮ್ಮ ಚಳ್ಳಕೆರೆ ಟಿವಿ ಯೊಂದಿಗೆ ಮಾತನಾಡಿ, ಇದೇ ಸೆಪ್ಟೆಂಬರ್ 3ರಂದು ನಡೆಯಲಿರುವ ಶ್ರೀ ಗೌರಸಮುದ್ರ ಮಾರಮ್ಮ ದೇವಿ ದೊಡ್ಡ ಜಾತ್ರೆಗೆ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.

ಆದ್ದರಿಂದ ಪಂಚಾಯತಿ ವ್ಯಾಪ್ತಿಯಲ್ಲಿ ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರು, ನೈರ್ಮಲೀಕರಣ, ಬೆಳಕಿನ ವ್ಯವಸ್ಥೆ, ಸ್ವಚ್ಛತೆ, ಹೀಗೆ ಎಲ್ಲಾ ಕ್ರಮಗಳ ಬಗ್ಗೆ ಪೂರ್ವ ಯೋಜಿತವಾಗಿ ಈಗಾಗಲೇ ಅಧಿಕಾರಿಗಳೊಂದಿಗೆ ಗೌರಸಮುದ್ರ ಗ್ರಾಮದಲ್ಲಿ ಹಾಗೂ ಜಾತ್ರೆ ನಡೆಯುವ ತುಮಲು ಪ್ರದೇಶದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸುಮಾರು 300 ಎಲ್ಇಡಿ ಬಲ್ಪ್ ಗಳನ್ನು ಬೆಳಕಿನ ವ್ಯವಸ್ಥೆಗೆ ಈಗಾಗಲೇ ಅಳವಡಿಸಲಾಗಿದೆ.

ಇನ್ನು ಕುಡಿಯುವ ನೀರಿಗಾಗಿ ಗೌರಸಮುದ್ರ ಗ್ರಾಮದಲ್ಲಿ ಒಂದು ಕೊಳವೆ ಬೋರ್ ವೆಲ್, ಜಾತ್ರೆ ನಡೆಯುವ ತುಮಲು ಪ್ರದೇಶದಲ್ಲಿ ಒಂದು ಕೊಳವೆ ಬೋರ್ವೆಲ್ ಗಳನ್ನು ಕೊರೆಯಿಸಿ ಇಂದು ನೀರನ್ನು ಮೇಲಕೆತ್ತುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಹೀಗೆ ಜಾತ್ರೆ ನಡೆಯುವವರೆಗೂ ಪೂರ್ವ ಸಿದ್ಧತೆ ಅಂಗವಾಗಿ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾದಿಗಳಿಗೆ ಅನುಕೂಲಕರವಾಗಿ ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ಚಂದ್ರಣ್ಣ, ವೀರಣ್ಣ, ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತರಾಜು ಇನ್ನಿತರರು ಪಾಲ್ಗೊಂಡಿದ್ದರು

Namma Challakere Local News
error: Content is protected !!