ಚಳ್ಳಕೆರೆ : ಕುಡಿತದ ಚಟದಿಂದ ತಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನಿಮ್ಮನ್ನೆ ನೆಚ್ಚಿಕೊಂಡ ನಿಮ್ಮ ಮಡದಿ ಹಾಗೂ ಮಕ್ಕಳು ಅನಾಥರಾಗುತ್ತಾರೆ ಆದ್ದರಿಂದ ಕುಡಿತದ ಚಟದಿಂದ ಎಲ್ಲರೂ ಕೂಡ ಹೊರಬರಬೇಕು ಎಂದು ಪಿಎಸ್ಐ ಶಿವರಾಜ್ ಕಿವಿಮಾತು ಹೇಳಿದರು
ಅವರು ನಗರದ ಜೈನ್ ಭವನದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆ ಟ್ರಸ್ಟ್ ಚಳ್ಳಕೆರೆ ತಾಲ್ಲೂಕು ಹಾಗೂ ಡಾ. ಡಿ ವೀರೇಂದ್ರ ಹೆಗಡೆ ರವರ ಹಾಗೂ ಮಾತೃಶ್ರೀ ಹೇಮಾವತಿ ಹೆಗಡೆ ರವರ 1847ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಚಳ್ಳಕೆರೆ ತಾಲೂಕು ಇವರ ಆಶ್ರಯದಲ್ಲಿ
ಮಧ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾದರೂ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ, ಕುಡಿತದ ಚಟದಿಂದ ಹೊರಬನ್ನಿ , ಹೊಸ ಜೀವನ ಕಟ್ಟಿಕೊಳ್ಳಿ ಎಂದರು.
ಇದೇ ಸಂಧರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರಭದ್ರಪ್ಪ, ಬಾಅಲೆಕಾಯಿ ರಾಮದಾಸ್, ಜಗದೀಶ್, ಶ್ರೀ ಸಾಯಿ ಬಾಬ ಟ್ರಸ್ಟ್ ನ ಅಧ್ಯಕ್ಷ ಬಿಸಿ.ಸಜೀವ ಮೂರ್ತಿ, ಸರಕಾರದ ನಾಮ ನಿರ್ದೇಶನ ಸದಸ್ಯ ನೇತಾಜಿ ಪ್ರಸನ್ನ, ಸುರಕ್ಷಾ ಕ್ಲಿನಿಕ್ ನ ಬಿ.ಪರೀದ್ ಖಾನ್, ಪಾಪಣ್ಣ, ಕಿಶೋರ್, ದೊಡ್ಡ ರಂಗಪ್ಪ, ಸಾಲ್ವೆಂಟ್ ಪ್ರಕಾಶ್, ರಾಜಣ್ಣ, ಸಂಘದ ಪದಾಧಿಕಾರಿಗಳು ಇತರರು ಇದ್ದರು.