ಚಳ್ಳಕೆರೆ :
ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಬಿವಿಪಿ
ಪ್ರತಿಭಟನೆ
ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ,
ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ,
ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಎಬಿವಿಪಿಯಿಂದ
ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ
ತಾಲ್ಲೂಕು ಕಛೇರಿಗೆ ತಲುಪಿ, ತಪ್ಪಿತಸ್ಥರಿಗೆ ಗಲ್ಲಿಗೇರಿಸಬೇಕು
ಮತ್ತೆ ಇಂಥ ಕೃತ್ಯಗಳು ಮರುಕಳಿಸದಂತೆ, ಹೆಣ್ಣು ಮಕ್ಕಳಿಗೆ ರಕ್ಷಣೆ
ನೀಡಬೇಕೆಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ
ಸಲ್ಲಿಸಿದರು.