ಚಳ್ಳಕೆರೆ :
ದಲಿತ ಬಚಾವೋ ಕಾಂಗ್ರೆಸ್ ಹಠಾವೋ ಸಾಮಾವೇಶ
ನಡೆಯಲಿದೆ
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದಲಿತ ಬಚಾವೋ
ಕಾಂಗ್ರೆಸ್ ಹಠಾವೋ ಎಂಬ ಸಮಾವೇಶವನ್ನು ಇದೇ 28 ರಂದು
ಹಮ್ಮಿಕೊಂಡಿದ್ದೇವೆ ಎಂದು ರಾಜ್ಯ ಸಂಚಾಲಕ ದಲಿತ್ ರಮೇಶ್
ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು.
ಚುನಾವಣೆಗು ಮುನ್ನ ಸಿದ್ದರಾಮಯ್ಯ ನಾನು
ದಲಿತ ರಕ್ಷಕ ಎಂದಿದ್ದರು. ಆದರೆ ಈಗ ಅವರು ಭಕ್ಷಕರಾಗಿದ್ದಾರೆ.
ಎಸ್ ಇಪಿ ಟಿಎಸ್ ಪಿ ಯ 25 ಸಾವಿರ ಹಣವನ್ನು ಲೂಟಿ ಮಾಡಿ
ಗ್ಯಾರಂಟಿಗಳಿಗೆ ಬಳಸುತ್ತಿದ್ದಾರೆಂದು ಆರೋಪಿಸಿದರು.