ಚಳ್ಳಕೆರೆ :
ಪುರಸಭೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ಗೂಳಿ
ಬೆಂಬಲಿಗರು
ಹೊಸದುರ್ಗದ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷರು
ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಗೂಳಿಹಟ್ಟಿಶೇಖರ್
ಬೆಂಬಲಿಗರಾದ ಶ್ರೀಮತಿ ರಾಜೇಶ್ವರಿ ಆನಂದ ಮತ್ತು
ಉಪಾಧ್ಯಕ್ಷರಾಗಿ ಗೀತಾ ಅಸಂಗಿ ಆಯ್ಕೆಯಾಗಿದ್ದು, ಗೂಳಿಹಟ್ಟಿ
ಶೇಖರ್ ತನ್ನ ಬೆಂಬಲಿಗರನ್ನು ಸ್ಥಳೀಯ ಸಂಸ್ಥೆಯಲ್ಲಿ ಕೂರಿಸುವಲ್ಲಿ
ಯಶಸ್ವಿಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ
ರಾಜೇಶ್ವರಿ ಪತಿ ಆನಂದ್ ಮಾತಾಡಿ, ಬಿಜೆಪಿ ನಮಗೆ ಅವಕಾಶ
ನೀಡಿದ್ದು, ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.