ನಾಯಕನಹಟ್ಟಿ ಪಟ್ಟಣ ಪಂಚಾಯತಿ ಒಂದನೇ ವಾರ್ಡಿನ ಜಾಗನೂರಹಟ್ಟಿ ಸದಸ್ಯ ದುರುಗಪ್ಪ (70)ನಿಧನ.

ನಾಯಕನಹಟ್ಟಿ:: ನಾಯಕನಹಟ್ಟಿ ಪಟ್ಟಣ ಪಂಚಾಯತಿ ಒಂದನೇ ವಾರ್ಡಿನ ಜಾಗನೂರಹಟ್ಟಿ ಸದಸ್ಯ ದುರುಗಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು.
ಸೋಮವಾರ ಜಾಗನೂರಹಟ್ಟಿ ತಮ್ಮ ನಿವಾಸದಲ್ಲಿ ಬೆಳಗ್ಗೆ 8:30 ಕ್ಕೆ ಮೃತಪಟ್ಟಿದ್ದಾರೆ.

ಇನ್ನೂ ಜಾಗನೂರಹಟ್ಟಿ ಒಂದನೇ ವಾರ್ಡಿನ ಸದಸ್ಯ ದುರಗಪ್ಪ ಸುಮಾರು 70 ವರ್ಷದ ಇತ್ತೀಚಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.
ಪತ್ನಿ 4 ಜನ ಗಂಡು ಮಕ್ಕಳು . ಮೊಮ್ಮಕ್ಕಳು ಗಂಡು-11 ಹೆಣ್ಣು 3 ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಇದೇ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಮಾತನಾಡಿದರು ಸದಸ್ಯ ದುರುಗಪ್ಪ ಸರಳ ಸಜ್ಜನ ವ್ಯಕ್ತಿ ಗ್ರಾಮದಲ್ಲಿ ಉತ್ತಮ ಅಭಿಮಾನಿ ಬಳಗವನ್ನ ಹೊಂದಿದ್ದರು. ಅವರ ಸಾವು ಇಡೀ ಗ್ರಾಮಕ್ಕೆ ತುಂಬಲಾರದ ನಷ್ಟವಾಗಿದೆ ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಓಬಯ್ಯ, ಮಾಜಿ ಚೇರ್ಮನ್ ಬಿ ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಿ.ತಿಪ್ಪೇಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ, ಕಾರ್ಯದರ್ಶಿ ಕಾಟಯ್ಯ, ಜಿ.ಎಸ್ ಮಂಜುನಾಥ್ ಗೌಡ. ಸೇರಿದಂತೆ ಸಮಸ್ತ ಜಾಗನೂರಹಟ್ಟಿ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!